ದುಬೈ ಪ್ರವಾಸದಲ್ಲಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಇಲ್ಲಿನ ಜುಮೇರಾ ಲೇಕ್ ಟವರ್ ತಾಜ್ ಹೊಟೇಲಿನಲ್ಲಿ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಯುಎಇ ಘಟಕದ ಸದಸ್ಯರಾದ ಪರ್ವೇಝ್ ಜಿ.ಕೆ, ಇಕ್ಬಾಲ್ ಕಣ್ಣೂರು, ಅನ್ವರ್ ಮಾಣಿಲ, ಮೂಸಾ ಪೆರುವಾಯಿ ಭೇಟಿಯಾಗಿ ಸ್ವಾಗತಿಸಿ ಸೌಹಾರ್ದ ಮಾತುಕತೆ ನಡೆಸಿದರು.
ಅನಿವಾಸಿ ಭಾರತೀಯರ ಅತ್ಮೀಯತೆ ಮತ್ತು ಚುನಾವಣೆ ಸಂದರ್ಭದಲ್ಲಿ ತಮ್ಮ ಗೆಲುವಿಗೆ ಪರೋಕ್ಷವಾಗಿ ಸಹಕರಿಸಿದ ಈ ತಂಡಕ್ಕೆ ಶಾಸಕ ಅಶೋಕ್ ರೈ ಇದೇ ಸಂದರ್ಭದಲ್ಲಿ ಶುಭ ಹಾರೈಸಿ ಶ್ಲಾಘಿಸಿದರು.