Site icon newsroomkannada.com

‘600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಮರೇ ಇರಲಿಲ್ಲ’-  ಗುಲಾಂ ನಬಿ ಆಜಾದ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪ್ರದೇಶದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ಗುಲಾಂ ನಬಿ ಆಜಾದ್‌ ನೀಡಿದ ಹೇಳಿಕೆಯೊಂದು ಭಾರಿ ವೈರಲ್ ಆಗಿದೆ.

‘600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನೂ ಇರಲಿಲ್ಲ ಮತ್ತು ಹೆಚ್ಚಿನ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ’ ಎಂದು ಗುಲಾಂ ನಬಿ ಆಜಾದ್ ಹೇಳಿದರು.

ಅಲ್ಲದೆ, ‘ಹಿಂದೂ, ಮುಸ್ಲಿಂ, ರಜಪೂತ, ದಲಿತ, ಕಾಶ್ಮೀರಿ, ಗುಜ್ಜರ್ ನಾವೆಲ್ಲರೂ ಒಟ್ಟಾಗಿ ಈ ನಾಡನ್ನು ನಮ್ಮ ಮನೆಯಾಗಿಸಬೇಕು’ ಎಂದೂ ಗುಲಾಂ ನಬಿ ಆಜಾದ್‌ ಇದೇ ಸಂದರ್ಭದಲ್ಲಿ ಹೇಳಿದರು.

‘ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ ಅಂದು ಕೇವಲ 10-20 ಮುಸ್ಲಿಮರು ಮೊಘಲ್ ಸೈನ್ಯದ ಭಾಗವಾಗಿ ಭಾರತಕ್ಕೆ ಬಂದರು, ಉಳಿದವರೆಲ್ಲ ಇಲ್ಲಿದ್ದವರೇ ಮತಾಂತರಗೊಂಡರು’’ ಎಂದೂ ಕಾಂಗ್ರೆಸ್‌ ಮಾಜಿ ನಾಯಕ ಆಜಾದ್ ಹೇಳಿದರು.

“ಇದು ನಮ್ಮ ಮನೆ, ಯಾರೂ ಹೊರಗಿನಿಂದ ಬಂದಿಲ್ಲ. ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಮತ್ತು ಇಲ್ಲಿಯೇ ಸಾಯುತ್ತೇವೆ’ ಎಂದೂ ಗುಲಾಂ ನಬಿ ಆಜಾದ್‌ ಹೇಳಿದ್ದಾರೆ.

“ನಾನು ಸಂಸತ್ತಿನಲ್ಲಿ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ ಅದು ನಿಮಗೆ ತಲುಪಲಿಲ್ಲ. ಕೆಲವರು ಹೊರಗಿನಿಂದ ಬಂದವರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದು, ಅದಕ್ಕೆ ಪ್ರತಿಯಾಗಿ ನಾನು, ಒಳಗಿನಿಂದ ಅಥವಾ ಹೊರಗಿನಿಂದ ಬಂದಿಲ್ಲಎಂದು ಹೇಳಿದ್ದೆ..’ ಎಂಬುದಾಗಿ ಆಜಾದ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Exit mobile version