Site icon newsroomkannada.com

ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಗ್ನಾನಂದರಿಗೆ ‘ಹೂ ಮಳೆ’ಯ ಭವ್ಯ ಸ್ವಾಗತ

ಚೆನ್ನೈ: ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ (Indian Chess Grandmaster) ಮತ್ತು 2023ರ ಫಿಡೆ ವಿಶ್ವಕಪ್ (FIDE World Cup) ರನ್ನರ್ ಅಪ್ ಪ್ರಶಸ್ತಿ ವಿಜೇತ ಆರ್ ಪ್ರಗ್ನಾನಂದ (R Praggnanandhaa) ಅವರು ಇಂದು (ಆ.30) ಚೆನ್ನೈಗೆ (Chennai) ಬಂದಿಳಿದ ಸಂದರ್ಭದಲ್ಲಿ ಅವರಿಗೆ ಭರ್ಜರಿ ಸ್ವಾಗತ ದೊರಕಿದೆ.

ಪ್ರಗ್ನಾನಂದ ಅವರ ಸಹಪಾಠಿಗಳು, ಅಖಿಲ ಭಾರತ ಚೆಸ್ ಫೆಡರೇಶನ್ (All India Chess Federation)ನ ಪ್ರತಿನಿಧಿಗಳು ಮತ್ತು ರಾಜ್ಯ ಸರಕಾರದ ಪ್ರತಿನಿಧಿಗಳು ಸೇರಿದಂತೆ ಚೆಸ್ ಲೋಕದ ನೂತನ ಸ್ಟಾರನ್ನು ಸ್ವಾಗತಿಸಲು ಸಾವಿರಾರು ಜನರು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು.

ಬಾಕುವಿನ (Baku) ಅಝೆರ್ಬೈಜಾನ್ (Azerbaijan)ನಲ್ಲಿ ನಡೆದ ಫಿಡೆ ವಿಶ್ವಕಪ್-2023ರಲ್ಲಿ ಆರ್ ಪ್ರಗ್ನಾನಂದ ಅವರು ಉತ್ತಮ ಪ್ರದರ್ಶನವನ್ನು ನೀಡಿ ಫೈನಲ್ ನಲ್ಲಿ ಮ್ಯಾಗ್ನಸ್ ಕಾರ್ಲ್ ಸನ್ (Magnus Carlsen) ಅವರಿಗೆ ಪ್ರಬಲ ಪೈಪೋಟಿ ನೀಡಿ ರನ್ನರ್ ಅಪ್ ಆಗಿ ಮೂಡಿಬಂದಿದ್ದರು.

ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡುತ್ತಿದೆ. ಈ ವಿಡಿಯೋದಲ್ಲಿ ಪ್ರಗ್ನಾನಂದ ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದು ಮತ್ತು ಅವರನ್ನು ಸ್ವಾಗತಿಸಲು ಅಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದುನ್ನು ಕಾಣಬಹುದಾಗಿದೆ.

 

ಪ್ರಗ್ನಾನಂದ ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಅಲ್ಲಿ ನೆರೆದಿದ್ದವರು ಅವರ ಮೇಲೆ ಹೂವಿನ ಮಳೆ ಸುರಿಸುತ್ತಾರೆ.

ಹಾಗೆಯೇ ವಿವಿಧ ಕಲಾ ತಂಡಗಳು ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದು ಚೆಸ್ ಮಾಸ್ಟರ್ ಗೆ ಭವ್ಯ ಸ್ವಾಗತವನ್ನು ಕೋರಿದರು.

Exit mobile version