Site icon newsroomkannada.com

ವೀರಯೋಧ ಬಾಲಕೃಷ್ಣ ಪಟ್ಟೆ ಅವರಿಗೆ ಹುಟ್ಟೂರ ಸ್ವಾಗತ

ಪುತ್ತೂರು: ಸಿ.ಆರ್.ಪಿ.ಎಫ್ ಯೋಧ ಬಾಲಕೃಷ್ಣ ಪಟ್ಟೆ ಸುದೀರ್ಘ 20 ವರ್ಷಗಳ ಕಾಲ ಸೇನೆ ಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿ ಇಂದು ಅವರ ಸ್ವಗೃಹ ಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರನ್ನು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕರಾದ ಸಂಜೀವ ಮಠoದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನೀತಿಶ್ ಕುಮಾರ್ ಶಾಂತಿವನ ಹಾಗೂ ಪುರುಷೋತ್ತಮ ಮುಂಗ್ಲಿಮನೆ,ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ಅರುಣ್ ವಿಟ್ಲ, ಜಿಲ್ಲಾ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಬಿಜತ್ರೆ, ಆರ್ಯಾಪು ಶಕ್ತಿ ಕೇಂದ್ರ ಪ್ರಮುಖರಾದ ಜಯಂತ ಶೆಟ್ಟಿ, ಫಲಾನುಭವಿಗಳ ಪ್ರಕೋಷ್ಟ ದ ಸಹ ಸಂಚಾಲಕರಾದ ಸುಧಾಕರ ಆಳ್ವ ಕಲ್ಲಡ್ಕ , ವಿಶ್ವನಾಥ ಕುಲಾಲ್,ಆರ್ಯಪು ಪಂಚಾಯತ್ ಸದಸ್ಯರಾದ ಚೇತನ್, ಹಾಗೂ ಅವರ ಮನೆಯವರು ಉಪಸ್ಥಿತರಿದ್ದರು.

ಬಾಲಕೃಷ್ಣ ಪಟ್ಟೆ ಅವರ ಇಬ್ಬರು ಸಹೋದರರು ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

Exit mobile version