Site icon newsroomkannada.com

ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆ ; ಹಿಂದುಗಳಿಗೆ ಎಚ್ಚರಿಕೆಯ ಕರೆಗಂಟೆ, ಈ ಬಾರಿ ಯೋಚಿಸಿ ಮತ ಚಲಾಯಿಸಿ ; ವಿಶ್ವ ಹಿಂದು ಪರಿಷದ್ ಕರೆ

ಮಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಸರಕಾರ ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿರುವುದು ಬಹಳ ಆತಂಕಕಾರಿಯಾಗಿದೆ. ಮುಸ್ಲಿಮರ ವೋಟಿಗೋಸ್ಕರ ಹಿಂದುಳಿದ ವರ್ಗಕ್ಕೆ ಅವರನ್ನು ಸೇರಿಸಿ ಬಹುಸಂಖ್ಯಾತ ಹಿಂದೂಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ, ಸರಕಾರಿ ಕೆಲಸ ನೇಮಕಾತಿ, ಪೊಲೀಸ್ ಇಲಾಖೆ, ಇತರೆ ಸರಕಾರಿ ಸ್ವಾಮ್ಯಗಳ ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಮುಕ್ತ ಅವಕಾಶ ಕೊಟ್ಟಂತಾಗುತ್ತದೆ. ಇದರಿಂದ ಹಿಂದುಳಿದ ವರ್ಗದ ಹಿಂದುಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.

 

ದೇಶದ ಸಂಪತ್ತು ಮುಸ್ಲಿಮರಿಗೂ ಪಾಲು; ಹಿಂದುಗಳಿಗೆ ಬಗೆದ ದ್ರೋಹ

 

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ದೇಶದ ಎಲ್ಲ ವರ್ಗದವರ ಸಂಪತ್ತನ್ನು ಸರ್ವೇ ಮಾಡಿ ಹಂಚಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಬಹಳ ಗಂಭೀರವಾಗಿದೆ. ಶೇಕಡಾ 80 ಇರುವ ಹಿಂದೂಗಳ ಆಸ್ತಿ ಪಾಸ್ತಿ , ಸಂಪತ್ತು ಬಲವಂತವಾಗಿ ಕಸಿದುಕೊಂಡು ಮುಸ್ಲಿಮರಿಗೆ ನೀಡುವ ಉದ್ದೇಶ ಇದರ ಹಿಂದಿದ್ದು ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

 

ಹಿಂದುಗಳನ್ನು 2ನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶ ಇದಾಗಿದ್ದು ಕಾಂಗ್ರೆಸ್ ನ ಈ ವೋಟ್ ಬ್ಯಾಂಕ್ ರಾಜಕೀಯವನ್ನು ಹಿಂದೂಗಳು ತಿರಸ್ಕರಿಸಬೇಕಾಗಿದೆ.

 

ಚುನಾವಣೆಯಲ್ಲಿ ಯೋಚಿಸಿ ಮತ ಚಲಾಯಿಸಿ

ಕಾಂಗ್ರೆಸಿನ ಈ ಹಿಂದೂ ವಿರೋಧಿ ‘ಮುಸ್ಲಿಮರ ತುಷ್ಟೀಕರಣ ರಾಜಕಾರಣವನ್ನು ಧಿಕ್ಕರಿಸಿ ಹಿಂದೂಗಳ ಹಿತ ಬಯಸುವ , ದೇಶದ ಭದ್ರತೆ, ಅಭಿವೃದ್ಧಿಗಾಗಿ ಕೆಲಸ ಮಾಡುವ ಸರಕಾರ ಬರಬೇಕಾಗಿದೆ. ಚುನಾವಣೆಯಂದು ಹಿಂದೂಗಳು 100 % ಮತದಾನ ಮಾಡಬೇಕಾಗಿದೆ.

 

ಹಾಗಾಗಿ ಎಲ್ಲ ಹಿಂದೂಗಳು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಿ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕಾಗಿ ತಮ್ಮಲ್ಲಿ ವಿಶ್ವ ಹಿಂದೂ ಪರಿಷದ್ ವಿನಂತಿಸುತ್ತದೆ ಎಂದು ಶರಣ್ ಪಂಪ್ವೆಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version