ಮುಝಾಫರನಗರ: ಶಾಲಾ ಶಿಕ್ಷಕಿಯೊಬ್ಬರು ತನ್ನ ತರಗತಿಯಲ್ಲಿ ಗಣಿತ ಮಗ್ಗಿಯನ್ನು ತಪ್ಪಾಗಿ ಬರೆದ ಮುಸ್ಲಿಂ ಧರ್ಮದ ಹುಡುಗನೊಬ್ಬನಿಗೆ ತರಗತಿಯ ಇತರೇ ವಿದ್ಯಾರ್ಥಿಗಳಿಂದ ಹೊಡೆಸಿದ ಘಟನೆ ಉತ್ತರ ಪ್ರದೇಶದ ಮುಝಾಫರನಗರದ ಶಾಲೆಯೊಂದರಲ್ಲಿ ವರದಿಯಾಗಿದೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಲ್ಲಿನ ಮನ್ಸೂರ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಗೆ ವರುವ ಖುಭಾಪುರ್ ಎಂಬ ಗ್ರಾಮದಲ್ಲಿ ಗುರುವಾರದಂದು (ಆ.24) ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೇಹಾ ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಮತ್ತು ಪ್ರವರ್ತಕಿಯಾಗಿರುವ ತೃಪ್ತಾ ತ್ಯಾಗಿ ಎಂಬಾಕೆಯೇ ಈ ರೀತಿಯ ಅಮಾನವೀಯ ವರ್ತನೆ ತೋರಿದ ಶಿಕ್ಷಕಿಯಾಗಿದ್ದಾರೆ.
ಈ ವಿಡಿಯೋದಲ್ಲಿ, ಶಿಕ್ಷಕಿ ತ್ಯಾಗಿ ವಿದ್ಯಾರ್ಥಿಗಳು ಸಾಲಾಗಿ ಬಂದು ಆ ವಿದ್ಯಾರ್ಥಿಗೆ ಬಾರಿಸುವ ಸನ್ನಿವೇಶ ಸೆರೆಯಾಗಿದೆ ಮತ್ತು ಆ ಸಂದರ್ಭದಲ್ಲಿ ವಿದ್ಯಾರ್ಥಿಯು ಅಳುತ್ತಿರುವುದೂ ಅದರಲ್ಲಿ ದಾಖಲಾಗಿದೆ.
ಈ ಶಿಕ್ಷಕಿಯು ‘ಇಲ್ಲಿ ಎಷ್ಟು ಮುಸ್ಲಿಂ ವಿದ್ಯಾರ್ಥಿಗಳಿದ್ದಾರೋ, ಅವರೆಲ್ಲಾ ಅಲ್ಲಿಗೆ ಹೋಗುವಂತೆ ನಾನು ಹೇಳುತ್ತಿದ್ದೇನೆ..’ ಎಂದು ಹೇಳುವ ಮಾತುಗಳೂ ಸಹ ಆ ವ್ಯಕ್ತಿ ಮಾಡಿರುವ ವಿಡಿಯೋದಲ್ಲಿ ದಾಖಲಾಗಿದೆ ಮತ್ತು ಇದಕ್ಕೆ ವಿಡಿಯೋ ಮಾಡುತ್ತಿರುವ ವ್ಯಕ್ತಿ ‘ಸರಿಯಾಗಿ ಹೇಳಿದ್ರಿ..’ ಎಂದು ಪ್ರತಿಕ್ರಿಯಿಸುತ್ತಾನೆ.
ಈ ರೀತಿಯಾಗಿ ವಿದ್ಯಾರ್ಥಿಯ ಮೇಲೆ ತರಗತಿಯ ಇತರೇ ವಿದ್ಯಾರ್ಥಿಗಳಿಂದ ಥಳಿಸುವಂತೆ ಮಾಡಿದ ಶಿಕ್ಷಕಿಯ ಮೇಲೆ ಇದೀಗ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
The school is Neha Public School.
Muzaffar Nagar, Uttar Pradesh.The teacher is Tripta Tyagi.
She made other students beat a Muslim Student. She does this regularly.
So what is the use of going to the moon?
— Reshma Alam (@reshma_alamD) August 25, 2023