ನವದೆಹಲಿ: ಕೆವೈಸಿ ಪೂರ್ಣಗೊಳಿಸದ ಫಾಸ್ಟ್ಯಾಗ್ ಖಾತೆಗಳನ್ನು ನಿಷ್ಕ್ರಿಯ ಮಾಡಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಕೆವೈಸಿ ಪೂರ್ಣಗೊಳಿಸಿಕೊಂಡಿರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೇ ಜನವರಿ 31ರೊಳಗೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಅದು ಹೇಳಿದೆ. One Vehicle One FasTag ಪ್ರಕಾರವೇ ಬಳಕೆದಾರರು ನಡೆದುಕೊಳ್ಳುವುದು ಅನಿವಾರ್ಯ.. ಅವರು ತಮ್ಮ ಹಿಂದಿನ ಹಲವು ಫಾಸ್ಟಾಗ್‌ಗಳನ್ನು ರದ್ದುಗೊಳಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಬಳಕೆದಾರರು ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ತಮ್ಮ ಸನಿಹದ ಟೋಲ್ ಪ್ಲಾಜಾ ಅಥವಾ ತಮ್ಮ ಬ್ಯಾಂಕ್ ಸಂಪರ್ಕಿಸಬೇಕು ಎಂದು ತಿಳಿಸಿದೆ. ಕೆವೈಸಿ ಪೂರ್ಣಗೊಳಿಸದೇ ಫಾಸ್ಮಾಗ್ ಹೊಂದುವುದು ಆರ್‌ಬಿಐ ನಿಯಮಾವಳಿ ಪ್ರಕಾರ ತಪ್ಪು ಎಂದು ಅದು ತಿಳಿಸಿದೆ.ಭಾರತದಲ್ಲಿ 8 ಕೋಟಿಗೂ ಅಧಿಕ ಬಳಕೆದಾರರು ಫಾಸ್ಮಾಗ್ ಹೊಂದಿದ್ದಾರೆ.