Site icon newsroomkannada.com

ಗಣಿತ ಪ್ರಯೋಗಾಲಯದ ಮಹತ್ವ ಕಾರ್ಯಾಗಾರ

ಉಜಿರೆ : ನ.೬ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಗಣಿತ ಶಿಕ್ಷಕ- ಶಿಕ್ಷಕಿಯರಿಗೆ ಗಣಿತ ಪ್ರಯೋಗಾಲಯದ ಮಹತ್ವ, ಪ್ರಯೋಗಾಲಯದ ಬಳಕೆಯ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಬೋಲ್ಶೆಟ್ಟಿ ವೀರಣ್ಣ ಅವರು ಶಿಕ್ಷಕರಿಗೆ ಗಣಿತ ಪ್ರಯೋಗಾಲಯದ ಬಳಕೆ ಮತ್ತು ಗಣಿತ ಮಾದರಿಗಳ ತಯಾರಿಕೆಯ ಕುರಿತು ಮಾರ್ಗದರ್ಶನ ನೀಡಿದರು.

ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಅಶ್ವಿತಾ ಕಾರ್ಯಕ್ರಮ ನಿರೂಪಿಸಿ, ನಯನ ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯಕ್ ಕೆ.ಜಿ ಸ್ವಾಗತಿಸಿದರು.

Exit mobile version