main logo

ವಾಹನಗಳಿಗೆ ಎಚ್‌ ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ: ಡೆಡ್‌ ಲೈನ್‌ ವಿಸ್ತರಿಸಿದ ಸರ್ಕಾರ

ವಾಹನಗಳಿಗೆ ಎಚ್‌ ಎಸ್‌ ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ: ಡೆಡ್‌ ಲೈನ್‌ ವಿಸ್ತರಿಸಿದ ಸರ್ಕಾರ

ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಗಡುವನ್ನು 3 ತಿಂಗಳಿಗೆ ವಿಸ್ತರಣೆ ಮಾಡಿದೆ. ನವೆಂಬರ್ 17ಕ್ಕೆ ಅಂತ್ಯವಾಗಬೇಕಿದ್ದ ಎಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಅವಧಿಯನ್ನು ಇದದೀಗ ಫೆಬ್ರವರಿ 17ರ ವರೆಗೆ ವಿಸ್ತರಣೆ ಮಾಡಿದೆ. ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. 90 ದಿನಗಳ ಕಾಲಾವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಎಲ್ಲರೂ ಆದಷ್ಟು ಬೇಗ ಎಚ್‌ಎಸ್‌ ಆರ್‌ಪಿ ನಂಬರ್ ಪ್ಲೇಟ್ ಹಾಕುವಂತೆ ಮನವಿ ಮಾಡಿದ್ದಾರೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು 90 ದಿನಗಳಲ್ಲಿ ಎಚ್‌ಎಸ್‌ಆರ್‌ಪಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆಲ ಗೊಂದಲ, ಅವಧಿ ವಿಸ್ತರಣೆ ಬಳಿಕ ನವೆಂಬರ್ 17, 2023 ಕೊನೆಯ ದಿನಾಂಕ ನೀಡಲಾಗಿತ್ತು. ಇದರ ನಡುವೆ ಕೋರ್ಟ್‌ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಗಡುವು ವಿಸ್ತರಿಸಲು ರಾಜ್ಯಕ್ಕೆ ಸೂಚನೆ ನೀಡಿತ್ತು. ಇದರಂತೆ ಸಾರಿಗೆ ಇಲಾಖೆ 90 ದಿನಗಳಿಗೆ ಮತ್ತೆ ಅವಧಿ ವಿಸ್ತರಣೆ ಮಾಡಿದೆ.

2019ರ ಎಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳ ಪೈಕಿ ಕೇವಲ 2.6 ಲಕ್ಷ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಹಾಕಲಾಗಿದೆ. ಇನ್ನುಳಿದ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಹಾಕಿಲ್ಲ. ಇನ್ನು 90 ದಿನಗಳಲ್ಲಿ ಈ ವಾಹನಗಳು HSRP ನಂಬರ್ ಪ್ಲೇಟ್ ಹಾಕಬೇಕಿದೆ.

Related Articles

Leave a Reply

Your email address will not be published. Required fields are marked *

error: Content is protected !!