ಪುತ್ತೂರು : ಕಬಕ ಅಡ್ಯಲಾಯ ದೈವಸ್ಥಾನದ ಹಿಂಭಾಗದ ರಸ್ತೆಯಲ್ಲ ಸ್ವಿಫ್ಟ್ ಕಾರಿನಲ್ಲಿ ದನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ತಡೆದ ಘಟನೆ ಕಬಕ ಅಡ್ಯಲಾಯ ದೈವಸ್ಥಾನದ ಹಿಂಭಾಗದ ರಸ್ತೆಯಲ್ಲಿ ನಡೆದಿದೆ.
ನಾಲ್ಕು ಗೋವುಗಳು ಕಾರಿನಲ್ಲಿ ಪತ್ತೆಯಾಗಿತ್ತು. ಗೋವುಗಳನ್ನು ಬಿಟ್ಟು ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ಬಜರಂಗದಳ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನ ಮಾಡಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದು ಜಖಂ ಗೊಂಡಿದೆ.
ಎರಡು ದಿನ, ಎರಡು ಕರು ಪತ್ತೆಯಾಗಿದ್ದು, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಕೊಂಡೊಯ್ಯಲಾಗುತ್ತಿತ್ತು. ಕಾರು ಚಾಲಕ ಪರಾರಿಯಾಗಲು ಪ್ರಯತ್ನ ಪಟ್ಟ ಕಾರಣ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಬಿದ್ದಿದೆ. ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ನಾಲ್ಕು ಗೋವುಗಳನ್ನು ಹಾಗೂ ವಾಹನವನ್ನು ಪುತ್ತೂರು ನಗರ ಠಾಣೆಗೆ ಸಾಗಿಸಿದ್ದು, ಗೋವುಗಳಿಗೆ ನೀರು, ಮತ್ತು ಮೇವಿನ ವ್ಯವಸ್ಥೆಯನ್ನು ಬಜರಂಗದಳ ಕಾರ್ಯಕರ್ತರು ಮಾಡಿದ್ದಾರೆ.