Site icon newsroomkannada.com

ಶ್ರೀಲಂಕಾದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಗಾಯಕಿ ಭವತಾರಿಣಿ ನಿಧನ

ಭಾರತ ಸಿನಿಮಾ ರಂಗದಲ್ಲಿ ಸಂಗೀತ ಮಾಂತ್ರಿಕ ಎಂದೇ ಖ್ಯಾತವಾಗಿರುವ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಗಾಯಕಿ ಭವತಾರಿಣಿ ಹಠಾತ್ ನಿಧನ ಹೊಂದಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳಿನಿಂದ ಭವತಾರಿಣಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಭಾವತಾರಿಣಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ

ಭವತಾರಿಣಿ, ಕಳೆದ ಕೆಲವು ದಿನಗಳಿಂದ ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಯೇ ಅವರು ಜನವರಿ 25ರಂದು ರಾತ್ರಿ ನಿಧನ ಹೊಂದಿದ್ದಾರೆ. ಅವರ ಮೃತದೇಹವನ್ನು ಚೆನ್ನೈನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದೆಂದು ಹೇಳಲಾಗುತ್ತಿದೆ.

ಭಾವತಾರಿಣಿ ಸ್ವತಃ ಅದ್ಭುತ ಗಾಯಕಿ ಆಗಿದ್ದರು. ಹಲವು ತಮಿಳು ಹಾಡುಗಳನ್ನು ಹಾಡಿರುವ ಭಾವತಾರಿಣಿ ‘ಭಾರತಿ’ ಸಿನಿಮಾದ ಹಾಡಿಗಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಗಳಿಸಿದ್ದರು. ಈ ಸಿನಿಮಾ ಸುಬ್ರಹ್ಮಣ್ಯ ಭಾರತಿ ಅವರ ಜೀವನದ ಮೇಲೆ ಆಧಾರಿತವಾಗಿತ್ತು. ಇದು ಮಾತ್ರವೇ ಅಲ್ಲದೆ ತಮ್ಮ ಸುಮಧುರ ಗಾಯನಕ್ಕಾಗಿ ರಾಜ್ಯ ಪ್ರಶಸ್ತಿಗಳನ್ನು ಸಹ ಭಾವತಾರಿಣಿ ಗಳಿಸಿದ್ದರು.

Exit mobile version