Site icon newsroomkannada.com

ಮುಸ್ಲಿಮರು ನಿಮ್ಮ ಕಾಲೋನಿಗೆ ಬಂದರೆ ಕಲ್ಲಿನಿಂದ ಹೊಡೆಯಿರಿ: ಯತ್ನಾಳ್

ಕಲಬುರಗಿ: ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕಲಬುರಗಿಯ ಗಂಜ್‌ ಕಾಲೋನಿಯಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಯತ್ನಾಳ್‌, ಮುಸ್ಲಿಮರು ನಿಮ್ಮ ಕಾಲೋನಿಗೆ ಬಂದರೆ ಕಲ್ಲಿನಿಂದ ಹೊಡೆಯಿರಿ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

 

ನಿಮ್ಮ ಮನೆ ಮೇಲೆ ಕಲ್ಲು ಸಂಗ್ರಹ ಮಾಡಿ ಇಟ್ಟುಕೊಂಡಿರಿ. ಮುಸ್ಲಿಮರು ನಿಮ್ಮ ಕಾಲೋನಿಗೆ ಗಾಡಿ ಗೊಗೊಂಡು ಬರ್ತಾರೆ. ಅವರು ಬಂದರೆ ಕಲ್ಲಿನಲ್ಲಿ ಹೊಡೆಯಿರಿ ಎಂದು ಹೇಳಿದ್ದಾರೆ.

 

ನೆಹರೂ ಬಗ್ಗೆ ಮಾತು ಶುರು ಮಾಡಿದ ಯತ್ನಾಳ್, ಪಂಡಿತ್ ಅಂತೆ.. ಸುಮ್ಮನೆ ಪಂಡಿತ ಜವಾಹರ್ ಲಾಲ್ ನೆಹರು ಅಂತಾರೆ. ಇವನ ಸಮಯದಲ್ಲೆ 12 ಲಕ್ಷ ಎಕರೆ ಜಮೀನು ವಕ್ಫ ಆಸ್ತಿ ಕೊಟ್ಟಿದ್ದಾರೆ.

 

ವಾಜಪೇಯಿ., ಮೋದಿ ಅವರು ಬರೋವರೆಗೂ ಮುಸ್ಲಿಂರ ತುಷ್ಟೀಕರಣ ನಡೆಯುತ್ತಿತ್ತು.. ಆದ್ರೆ ಈಗ ಹಾಗಾಗೋದಿಲ್ಲ ಎಂದು ಯತ್ನಾಳ್‌ ಹೇಳಿದರು.

Exit mobile version