main logo

ಸಂಪಾದಕರಾದ್ರು IAS ಅಧಿಕಾರಿ ರೋಹಿಣಿ ಸಿಂಧೂರಿ!

ಸಂಪಾದಕರಾದ್ರು IAS ಅಧಿಕಾರಿ ರೋಹಿಣಿ ಸಿಂಧೂರಿ!

ಬೆಂಗಳೂರು: ಕಳೆದ ಕೆಲ ಸಮಯದ ಹಿಂದೆ IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ IPS ಅಧಿಕಾರಿ ರೂಪಾ ಮೌದ್ಗಿಲ್ (D Roopa) ಜಾಲತಾಣಗಳಲ್ಲಿ ಶುರುವಾದ ಕಿತ್ತಾಟ ನಂತರದ ದಿನಗಳಲ್ಲಿ ಗಂಭೀರ ರೂಪ ಪಡೆದು ನ್ಯಾಯಾಲಯದ ಮೆಟ್ಟಿಲೇರಿತ್ತು.

ಬಳಿಕ ಇಬ್ಬರಿಗೂ ನಿರ್ಧಿಷ್ಟ ಹುದ್ದೆಯನ್ನು ತೋರಿಸದೇ ಸರ್ಕಾರ ವರ್ಗಾವಣೆ ಮಾಡಿತ್ತು. ಕಳೆದ 6 ತಿಂಗಳಿನಿಂದ ಸರ್ಕಾರ ರೋಹಿಣಿ ಸಿಂಧೂರಿಗೆ ಯಾವುದೇ ಹುದ್ದೆ ನೀಡಿರಲಿಲ್ಲ.

IAS ಅಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರಿಗೆ ಕೊನೆಗೂ ರಾಜ್ಯ ಸರ್ಕಾರ ಹುದ್ದೆ ನೀಡಿದ್ದು, ಕರ್ನಾಟಕ ಗೆಜೆಟಿಯರ್ (Karnataka Gazetteer) ಇಲಾಖೆಯಲ್ಲಿ ಮುಖ್ಯ ಸಂಪಾದಕರ ಹುದ್ದೆಗೆ ಅವರನ್ನು ವರ್ಗಾವಣೆ ಮಾಡಲಾಗಿದೆ.

IPS ಅಧಿಕಾರಿ ರೂಪಾ ಮೌದ್ಗಿಲ್‌ ಜತೆಗಿನ ವಿವಾದದ ಆರು ತಿಂಗಳ ಬಳಿಕ IAS ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರ ಹುದ್ದೆ ನಿಯೋಜನೆ ಮಾಡಿದೆ. ಸದ್ಯ ರೋಹಿಣಿ ಸಿಂಧೂರಿ ಅವರು ಕರ್ನಾಟಕ ಗೆಜೆಟಿಯರ್‌ ಡಿಪಾರ್ಟ್‌ಮೆಂಟ್‌ನ ಮುಖ್ಯ ಸಂಪಾದಕರಾಗಿದ್ದಾರೆ.

ಬುಧವಾರ ರಾಜ್ಯದ ಹಲವು IAS ಅಧಿಕಾರಿಗಳ ವರ್ಗಾವಣೆಯಾಗಿದ್ದು, ಈ ವೇಳೆ ಹಲವು ದಿನಗಳಿಂದ ಹುದ್ದೆಗಾಗಿ ಕಾದು ಕುಳಿತಿದ್ದ ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮುಂದಿನ ಆದೇಶದವರೆಗೂ ಅವರು ಕರ್ನಾಟಕ ಗೆಜೆಟಿಯರ್‌ ಇಲಾಖೆಯ ಮುಖ್ಯ ಸಂಪಾದಕರ ಹುದ್ದೆ ನಿರ್ವಹಿಸುವಂತೆ ಸೂಚಿಸಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!