ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Elections) ಎರಡನೇ ಹಂತದ ಮತದಾನ ದೇಶದ ವಿವಿಧೆಡೆ ಇಂದು ನಡೆಯುತ್ತಿದೆ. ಇದರಲ್ಲಿ ಕರ್ನಾಟಕದ (Karnataka Voting) 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳು (Lok Sabha Constituencies) ಸೇರಿವೆ. ಅಸ್ಸಾಂ, ಬಿಹಾರ, ಛತ್ತೀಸ್ಗಢ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಕ್ಷೇತ್ರಗಳಲ್ಲಿಯೂ ಇಂದು ಮತದಾನ ನಡೆಯಲಿದೆ. ಎರಡನೇ ಹಂತದ ಚುನಾವಣೆಯಲ್ಲಿ ಅಸ್ಸಾಂನ 5, ಬಿಹಾರದ 5, ಛತ್ತೀಸ್ಗಢದ 3, ಕರ್ನಾಟಕದ 14, ಕೇರಳದ 20, ಮಧ್ಯಪ್ರದೇಶದ 7, ಮಹಾರಾಷ್ಟ್ರದ 8, ಮಣಿಪುರದ 1, ರಾಜಸ್ಥಾನದ 13, ತ್ರಿಪುರಾದ 1, ಉತ್ತರ ಪ್ರದೇಶದ 8, ಪಶ್ಚಿಮ ಬಂಗಾಳದ 3 ಮತ್ತು ಜಮ್ಮು ಮತ್ತು ಕಾಶ್ಮೀರದ 1 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟಗೊಳ್ಳಲಿದೆ.