main logo

ಪಾರ್ಟಿಯಲ್ಲಿ 26 ಪುರುಷರ ಜೊತೆಗೆ ಖಾಸಗಿ ಕ್ಷಣ

ಪಾರ್ಟಿಯಲ್ಲಿ 26 ಪುರುಷರ ಜೊತೆಗೆ ಖಾಸಗಿ ಕ್ಷಣ

ಸತ್ಯ ಒಪ್ಪಿಕೊಂಡ ಪತ್ನಿಗೆ ಹೊಟೇಲ್ ನಲ್ಲಿ ಪತಿ ಮಾಡಿದ್ದೇನು?

ಮದುವೆಗೆ ಮುನ್ನ ಪ್ರೀತಿ, ಕ್ರಷ್ ಅಂತ ಅನೇಕರ ಜೊತೆ ಹುಡುಗ – ಹುಡುಗಿ ಇಬ್ಬರೂ ಸುತ್ತಾಡುತ್ತಾರೆ. ಬಹುತೇಕರು ಮದುವೆ ನಂತ್ರ ಹಿಂದಿನದೆಲ್ಲ ಮರೆತು ಸಂಗಾತಿ ಜೊತೆ ಆರಾಮವಾಗಿ ಜೀವನ ನಡೆಸ್ತಾರೆ. ಹದಿಹರೆಯದಲ್ಲಿ ಮಾಡಿದ ಕೆಲಸವನ್ನು ಮರೆತು ಪ್ರೀತಿಯಿಂದ ದಿನಕಳೆಯುತ್ತಾರೆ. ಇನ್ನು ಕೆಲವರು ಮದುವೆ ಆದ್ಮೇಲೂ ತಮ್ಮ ಈ ಅಭ್ಯಾಸವನ್ನು ಮುಂದುವರೆಸಿ ಜೀವನ ಹಾಳು ಮಾಡಿಕೊಳ್ತಾರೆ. ಮತ್ತೆ ಕೆಲವರು ಮದುವೆಯಾಗಿ ಎಷ್ಟೋ ವರ್ಷದ ನಂತ್ರ ಮದುವೆಗೆ ಮುನ್ನ ನಡೆದ ಘಟನೆಯನ್ನು ನೆನಪು ಮಾಡಿಕೊಂಡು ಜಗಳವಾಡ್ತಾರೆ. ಕೆಲ ದಿನಗಳ ಹಿಂದೆ ಎಪ್ಪತ್ತು ವರ್ಷದ ಹಿಂದೆ ಮಾಜಿ ಪ್ರೇಯಸಿಗೆ ಬರೆದ ಪತ್ರ ಹಿಡಿದುಕೊಂಡು ಮಹಿಳೆಯೊಬ್ಬಳು ಪತಿ ಮೇಲೆ ಹಲ್ಲೆ ನಡೆಸಿದ್ದಳು. ಈಗ ಇನ್ನೊಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಪತ್ನಿಯ ಹಳೆ ವಿಷ್ಯವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾನೆ. ಮುಂದೇನು ಮಾಡ್ಬೇಕು ತಿಳಿಯುತ್ತಿಲ್ಲ. ನೀವೇ ಸಲಹೆ ನೀಡಿ ಎಂದು ರೆಡ್ಡಿಟ್ ನಲ್ಲಿ ಪೋಸ್ಟ್ ಹಾಕಿದ್ದಾನೆ.

ರೆಡ್ಡಿಟ್ (Reddit) ನಲ್ಲಿ ವ್ಯಕ್ತಿ 18 ವರ್ಷದ ಹಿಂದಿನ ಘಟನೆ ತೆಗೆದು ಈಗ ಪತ್ನಿಗೆ ವಿಚ್ಛೇದನ (Divorce) ನೀಡುವ ಬಗ್ಗೆ ಆಲೋಚನೆ ಮಾಡ್ತಿದ್ದಾನೆ. ಆತನ ಪತ್ನಿ ಹಾಗೂ ಆತ ಇಬ್ಬರೂ ಬಾಲ್ಯದಿಂದಲೂ ಪರಿಚಿತರು. ಹೈಸ್ಕೂಲ್ ನಲ್ಲಿರುವಾಗ್ಲೇ ಇಬ್ಬರ ಮಧ್ಯೆ ಪ್ರೀತಿ (Love ) ಚಿಗುರಿತ್ತು. ವಿಶ್ವವಿದ್ಯಾನಿಲಯಕ್ಕೆ ಬಂದ್ಮೇಲೆ ಇಬ್ಬರ ಕೋರ್ಸ್ ಬೇರೆ ಆಗಿತ್ತು. ಹಾಗಾಗಿ ಇಬ್ಬರೂ ಸ್ವಲ್ಪ ದೂರವಾಗಿದ್ದರು. ಪ್ರತಿ ವೀಕೆಂಡ್ ನಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಆತ ಬಯಸುತ್ತಿದ್ದ. ಆದ್ರೆ ಪ್ರೇಯಸಿ ಸಿಗ್ತಿರಲಿಲ್ಲ.

ಪದವಿ ಮುಗಿದ ಮೇಲೆ ಇಬ್ಬರೂ ಮದುವೆ ಆಗಿದ್ದಾರೆ. ಇಬ್ಬರಿಗೆ ಮುದ್ದಾದ ಇಬ್ಬರು ಮಕ್ಕಳಿವೆ. ಮದುವೆಯಾಗಿ ಇಬ್ಬರು ಮಕ್ಕಳಾಗುವವರೆಗೂ ಎಲ್ಲವೂ ಆರಾಮವಾಗಿಯೇ ನಡೆದಿತ್ತು. ಇಬ್ಬರ ಮಧ್ಯೆ ಅಪಾರ ಪ್ರೀತಿ ಇತ್ತು. ಎಲ್ಲವೂ ಸಂತೋಷವಾಗಿದೆ ಎಂದು ಆತ ಭಾವಿಸಿದ್ದ. ಆದ್ರೆ ಒಂದು ಪಾರ್ಟಿಯಲ್ಲಿ ನಡೆದ ಮಾತುಕಥೆ ಆತನ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಈಗ ಮನೆಯಿಂದ ಹೊರಬಿದ್ದಿರುವ ಪತಿ, ಪತ್ನಿಗೆ ವಿಚ್ಛೇದನ ನೀಡ್ಲಾ ಇಲ್ಲ ಆಕೆ ಮಾಡಿದಂತೆ ನಾನೂ ಮಾಡಲಾ ಎಂದು ಪ್ರಶ್ನೆ ಮಾಡುತ್ತಿದ್ದಾನೆ.

ಪತ್ನಿ ಮಾಡಿದ್ದೇನು? : ರೆಡ್ಡಿಟ್ ನಲ್ಲಿ ಪೋಸ್ಟ್ ಹಾಕಿದ ವ್ಯಕ್ತಿ ಪ್ರಕಾರ, ಆತ ಕೆಲ ದಿನಗಳ ಹಿಂದೆ ಪಾರ್ಟಿಯೊಂದಕ್ಕೆ ಹೋಗಿದ್ದ. ಅಲ್ಲಿ ಆತ ಹಾಗೂ ಆತನ ಪತ್ನಿ ಜೊತೆ ಕೆಲ ಪದವಿ ಸ್ನೇಹಿತರಿದ್ದರಂತೆ. ಈ ವೇಳೆ ಕೆಲ ಸ್ನೇಹಿತರು ಪದವಿ ಸಮಯದಲ್ಲಿ ಪತ್ನಿ ಮಾಡಿದ ಕೆಲಸವನ್ನು ಹೇಳಿದ್ದಾರೆ.

ಸ್ನೇಹಿತರ ಮಾತು ಕೇಳಿದ ಈತನಿಗೆ ತಲೆ ತಿರುಗಿದಂತಾಗಿದೆ. ಪ್ರೀತಿಗೆ ಮೋಸವಾಗಿದೆ ಎಂದು ಆತ ಭಾವಿಸಿದ್ದಾನೆ. ಮನೆಗೆ ಬಂದು ಪತ್ನಿಗೆ ಪ್ರಶ್ನೆ ಕೇಳಿದಾಗ ಆಕೆ ಕೂಡ ಇದನ್ನು ಒಪ್ಪಿಕೊಂಡಿದ್ದಾಳೆ. ಹದಿಹರೆಯಲ್ಲಿ ಮಾಡಿದ ಘಟನೆ ಇದು. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಆಕೆ ಹೇಳಿದ್ದಾಳೆ.

ಪದವಿ ಸಮಯದಲ್ಲಿ ಅನೇಕ ಪಾರ್ಟಿಗೆ ಹೋಗ್ತಿದ್ದ ಪತ್ನಿ 26 ಪುರುಷರ ಜೊತೆ ಸಂಬಂಧ ಹೊಂದಿದ್ದಳು. ಅನೇಕ ಸ್ನೇಹಿತರ ಜೊತೆ ಶಾರೀರಿಕ ಸಂಬಂಧ ಕೂಡ ಬೆಳೆಸಿದ್ದಳು. ಆಗ ನಾನು ಪ್ರಬುದ್ಧವಾಗಿರಲಿಲ್ಲ. ಅದರಲ್ಲಿ ಬಾಲಿಶತೆ ಇತ್ತು ಎಂದಿದ್ದಾಳೆ. ಇದನ್ನು ಕೇಳಿದ ಪತಿ ಆ ಕ್ಷಣ ಮನೆಬಿಟ್ಟಿದ್ದಾನೆ. ಸದ್ಯ ಹೊಟೇಲ್ ನಲ್ಲಿ ವಾಸವಾಗಿದ್ದಾನೆ. ಪತ್ನಿಯಿಂದ ಪದೇ ಪದೇ ಮೆಸ್ಸೇಜ್ ಕೇಳಿದ್ದು, ಅನೇಕರು ಉತ್ತರ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!