ಈರುಳ್ಳಿ ಬೋಂಡ ಸಂಜೆ ಚಹಾದ ಜೊತೆ ತಿನ್ನಲು ಇದ್ರೆ ಚೆನ್ನ. ಇದು ಸಖತ್ ಟೇಸ್ಟಿಯೂ ಹೌದು, ಜೊತೆಗೆ ತುಂಬಾ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿಯೂ ಕೂಡ. ಹಾಗಾಗಿ ಇಂದು ನಾವು ಮನೆಯಲ್ಲಿಯೇ ಈರುಳ್ಳಿ ಬೋಂಡ ಮಾಡುವುದು ಹೇಗೆ ಎಂದು ನೋಡೋಣ.
ಈರುಳ್ಳಿ ಬೋಂಡ ಮಾಡಲು ಮೊದಲಿಗೆ, ಬೋಂಡದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಗೂ ಅಡುಗೆ ಸೋಡಾ, ಅರಿಶಿಣದ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಅದಕ್ಕೆ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿ. ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಸಮಯ ಹಾಗೆ ಬಿಡಿ. ನಂತರ ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಬಿಸಿಯಾದ ಬಳಿಕ ಹಿಟ್ಟನ್ನು ಉಂಡೆಗಳ ರೀತಿಯಲ್ಲಿ ಮಾಡಿ ಎಣ್ಣೆಯಲ್ಲಿ ಬಿಡಿ. ಚೆನ್ನಾಗಿ ಕರಿದ ನಂತರ ಚಹಾದ ಜೊತೆ ತಿನ್ನಿ.
Photo credit – Wikimedia