Site icon newsroomkannada.com

ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಮಂಗಳೂರು: ಭಾ. ಕೃ. ಅ. ಪ.- ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು ಹಾಗೂ ಭಾ. ಕೃ. ಅ. ಪ.- ರಾಷ್ಟೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ ಹೈದರಾಬಾದ ಇವರುಗಳ ಸಹಯೋಗದಲ್ಲಿ ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಡಾ. ಎಂ. ಬಾಲಕೃಷ್ಣನ, ಪ್ರಧಾನ ವಿಜ್ಞಾನಿಗಳು ಹಾಗೂ ಅಧ್ಯಕ್ಷರು (SCSP) ನಾರ್ಮ್ ಹೈದರಾಬಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ ಸಿ ಎಸ್ ಪಿ ಯೋಜನೆಗಳು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿವರಿಸಿ ಕೃಷಿ ಪದ್ಧತಿಯಲ್ಲಿ ಜೇನು ಸಾಕಾಣಿಕೆಯಂತಹ ಉಪಕಸಬುಗಳು ರೈತರ ಸುಸ್ಥಿರ ಜೀವನೋಪಾಯಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು. ರಾಜ್ಯ ಮಟ್ಟದ ತರಬೇತುದಾರ ರಾಧಾಕೃಷ್ಣ ಕೋಡಿ ಜೇನು ಕೃಷಿ ತರಬೇತಿ ನೀಡಿದರು ಡಾ. ಎಸ್. ಆರ್. ಸೋಮಶೇಖರ್, ಪ್ರಾಧ್ಯಾಪಕರು ಮತ್ತು ಸಹ ವಿಸ್ತರಣಾ ನಿರ್ದೇಶಕರು ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ರವರು ವೈಜ್ಞಾನಿಕ ಕ್ರಮದಲ್ಲಿ ಜೇನು ಕೃಷಿಯನ್ನು ಮಾಡಬೇಕೆಂದು ರೈತರಿಗೆ ಒತ್ತಾಯಿಸಿದರು. ಶ್ರೀ. ಹರೀಶ್ ಉಬರಡ್ಕ, ಅಧ್ಯಕ್ಷರು, ಗ್ರಾಮ ಪಂಚಾಯತ್ ಮಹಾ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇವರು ಭಾಗವಿಹಿಸಿ ರೈತರ ಸುಸ್ಥಿರತೆಗಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಮ್ಮುಖದಲ್ಲಿ ಕೆಲಸ ಮಾಡಬೇಕೆಂದು ಹೇಳಿದರು. ಡಾ. ಟಿ. ಜೆ. ರಮೇಶ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೆವಿಕೆ ಮಂಗಳೂರು ಇವರು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳಿಂದ ರೈತರು ಜೇನುಕೃಷಿಯಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನೂ ಡಾ. ಮಲ್ಲಿಕಾರ್ಜುನ ಎಲ್ ರವರು ಸ್ವಾಗತಿಸಿದರು ಹಾಗೂ ಡಾ.ಹರೀಶ್ ಶೆಣೈ ರವರು ವಂದಿಸಿದರು. ಶ್ರೀ ರಾಧಾಕೃಷ್ಣ ಕೆ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು ಮತ್ತು ಡಾ. ಕೇದಾರನಾಥ, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಕೆವಿಕೆ ಮಂಗಳೂರು ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 25 ರೈತರು ಹಾಗೂ ಕೆ ವಿ ಕೆ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದರು.

Exit mobile version