Site icon newsroomkannada.com

ಹೊಂಬಾಳೆ ಬಿಡುಗಡೆ ಮಾಡಿದ `ರಾಮ ಮಂಗಳಂ’ ಭಕ್ತಿಗೀತೆ ವಿಡಿಯೋ ನೋಡಿ

ಬೆಂಗಳೂರು: ದೇಶದ ಸೂಪರ್ ಹಿಟ್ಸ್ ಸಿನಿಮಾಗಳ ಮೇಕರ್ ವಿಜಯ್ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ ಅಯೋಧ್ಯೆ ರಾಮನಿಗಾಗಿ “ರಾಮ ಮಂಗಳಂ” ಗಾಯನ ಗುಚ್ಚ ಅರ್ಪಣೆ ಮಾಡಿದೆ. 17ನೇ ಶತಮಾನದ ರಾಮಭಕ್ತ, ಪುರಾಣ ಪ್ರಸಿದ್ಧ ಗಾಯಕ ಶ್ರೀ ಭದ್ರಾಚಲ ರಾಮದಾಸು ರಚಿಸಿದ್ದ `ರಾಮಮಂಗಳಂ’ ಗೀತೆಗೆ ಗಾಯನ ಸ್ವರೂಪ ಕೊಟ್ಟಿದ್ದಾರೆ.

ರಾಮಮಂದಿರ ಲೋಕಾರ್ಪಣೆ ಸುದಿನವನ್ನು ಒಂದು ದೇಶ, ಒಂದು ಸಂಸ್ಕೃತಿ ಎನ್ನುವ ರೀತಿಯಲ್ಲಿ ರಾಮಮಂಗಳಂ ಗೀತೆ ಸಂಯೋಜಿಸಲಾಗಿದೆ. ಕರ್ನಾಟಕದ ಕಲಾಶ್ರೀ ಖ್ಯಾತಿಯ ಪಂಡಿತ್ ಪ್ರವೀಣ್ ಡಿ ರಾವ್ ಸಾರಥ್ಯದಲ್ಲಿ ವಿ.ಎಸ್.ಶೃತಿ, ಅರುಂಧತಿ ವಶಿಷ್ಠಾ, ಪೂಜಾರಾವ್, ಚಿನ್ಮಯಿ ಚಂದ್ರಶೇಖರ್, ನಿಖಿಲ್ ಪಾರ್ಥಸಾರಥಿ, ಸಾಥ್ವಿಕ್ ಚಕ್ರವರ್ತಿ, ಹೆಚ್.ಸಿ.ಭಾರ್ಗವ್, ಮಧ್ವೇಶ್ ಭಾರದ್ವಾಜ್, ಎಂ.ಆರ್.ಅಭಿಷೇಕ್ ಸೇರಿರುವ ಗಾಯಕರ ತಂಡ ರಾಮಮಂಗಳ ಗೀತೆಗೆ ಧ್ವನಿಯಾಗಿದ್ದಾರೆ. ರಾಮಲಲ್ಲಾ

ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊಂಬಾಳೆ ಫಿಲ್ಮ್ಸ್ ವತಿಯಿಂದ ರಾಮಮಂಗಳಂ ಗೀತೆ ಸಂಯೋಜಿಸಿ, ಅಯೋಧ್ಯೆ ರಾಮನಿಗೆ ಸಮರ್ಪಿಸಿದ್ದಾರೆ.
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಸೋಮವಾರ (ಜನವರಿ 22) ಪ್ರಾಣಪ್ರತಿಷ್ಠೆ ನೆರವೇರಿಸಲಾಗುತ್ತದೆ. ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ.

Exit mobile version