Site icon newsroomkannada.com

200 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿದ್ರಾ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್‌ ಶರ್ಮಾ

ಮುಂಬೈನಿಂದ ಪುಣೆಗೆ ಪ್ರಯಾಣಿಸುವ ವೇಳೆ ಅಂದು ನಿಜಕ್ಕೂ ಆಗಿದ್ದೇನು?

ಮುಂಬೈ: ಏಕದಿನ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ ಪಾಕ್‌ ವಿರುದ್ಧ ಗೆದ್ದು ಬೀಗಿದೆ. ಈ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ರೋಹಿತ್ ಶರ್ಮಾ ಗಂಟೆಗಳ ಒಳಗೆ ಮೂರು ಬಾರಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಮುಂಬೈನಿಂದ ಪುಣೆಗೆ ಪ್ರಯಾಣಿಸುವಾಗ ಹಿಟ್​ಮ್ಯಾನ್ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದು, ಹೀಗಾಗಿ ಮೂರು ಬಾರಿ ಫೈನ್ ಹಾಕಲಾಗಿದೆ ಎಂದು ವರದಿಯಾಗಿದೆ.

ತಮ್ಮ ನೀಲಿ ಬಣ್ಣದ ಲಂಬೋರ್ಗಿನಿಯಲ್ಲಿ ರೋಹಿತ್ ಶರ್ಮಾ ಮುಂಬೈನಿಂದ ಪುಣೆಗೆ ತೆರಳಿದ್ದರು. ಈ ವೇಳೆ ಗಂಟೆಗೆ 200 ಕಿ.ಮೀ ಕಾರು ಚಲಾಯಿಸಿದ್ದರು. ಇದು ಕೆಲವೊಮ್ಮೆ ಕೆಲವೊಮ್ಮೆ ಗಂಟೆಗೆ 215 ಕಿಮೀ ತಲುಪಿತ್ತು. ಪರಿಣಾಮವಾಗಿ, ಅವರ ವಾಹನದ ನಂಬರ್ ಪ್ಲೇಟ್‌ಗೆ ಮೂರು ಆನ್‌ಲೈನ್ ಟ್ರಾಫಿಕ್ ಚಲನ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ರೋಹಿತ್ ಶರ್ಮಾ ಹೆಲಿಕಾಪ್ಟರ್ ಮೂಲಕ ಅಹಮದಾಬಾದ್‌ನಿಂದ ನೇರವಾಗಿ ಮುಂಬೈಗೆ ತೆರಳಿದ್ದರು.

ಕುಟುಂಬದೊಂದಿಗೆ ಎರಡು ದಿನಗಳನ್ನು ಕಳೆದ ನಂತರ, ಭಾರತೀಯ ನಾಯಕ ಪುಣೆಗೆ ತೆರಳಲು ನಿರ್ಧರಿಸಿದ್ದರು. ಅದರಂತೆ ತಮ್ಮ ಕಾರಿನಲ್ಲಿ ಅತೀ ವೇಗವಾಗಿ ಡ್ರೈವ್ ಮಾಡಿ ಇದೀಗ ತೊಂದರೆಗೆ ಸಿಲುಕಿದ್ದಾರೆ.

Exit mobile version