ಬೆಂಗಳೂರು: ಬಿಜೆಪಿ ಎಂಎಲ್‌ಎ ಟಿಕೆಟ್ ಗಾಗಿ ಉದ್ಯಮಿಯೊಬ್ಬರಿಂದ ಐದು ಕೋಟಿ ರೂಪಾಯಿ ಹಣ ಡೀಲ್ ನಡೆಸಿದ ಪ್ರಕರಣದ ಆರೋಪದಡಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ನಿನ್ನೆ (ಸೆ.12) ರಾತ್ರಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ.
ಬೈಂದೂರು ಮೂಲಕದ ಉದ್ಯಮಿಯೊಬ್ಬರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಚೈತ್ರಾ ಅವರನ್ನು ಬಂಧಿಸಲಾಗಿದೆ.
ಚೈತ್ರಾ ಕುಂದಾಪುರ ಅರೆಸ್ಟ್ ಆದ್ಮೇಲೂ ಹೈಡ್ರಾಮಾ ಮಾಡಿದ್ದು, CCB ಪೊಲೀಸರು ಚೈತ್ರಾ ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದ ವೇಳೆ ಸೂಸೈಡ್ ಪ್ರಯತ್ನ ಮಾಡಿದ್ದಾರೆ. ಕಾರಿನ ಗಾಜು ಒಡೆದು ಹೊರಗೆ ಹಾರಲು ಯತ್ನ, ಕೈನಲ್ಲಿದ್ದ ಉಂಗುರ ನುಂಗಿ ಸೂಸೈಡ್ ಅಟೆಂಪ್ಟ್ ನಡೆಸಿದ್ದಾರೆ. ಸಿಸಿಬಿ ಪೊಲೀಸರು ಈ ಆತ್ಮಹತ್ಯೆ ಪ್ರಯತ್ನವನ್ನು ತಡೆದಿದ್ದಾರೆ.
ಚೈತ್ರಾಗೆ ಆಶ್ರಯ ನೀಡಿದ್ದ ಮುಸ್ಲಿಂ ಮಹಿಳೆ: ಚೈತ್ರಾ ಕುಂದಾಪುರ ಉಡುಪಿಯ ಕಾಂಗ್ರೆಸ್ನ ಮುಸ್ಲಿಂ ನಾಯಕಿ ಅಂಜುಂ ಎಂಬವರ ಮನೆಯಲ್ಲಿ ಆಶ್ರಯ ಪಡೆದಿರುವುದು ಬೆಳಕಿಗೆ ಬಂದಿದೆ. ಉಡುಪಿಯ ಅಪಾರ್ಟ್ಮೆಂಟ್ನಲ್ಲಿ ಕಳೆದ 7 ದಿನಗಳಿಂದ ಚೈತ್ರಾ ಕುಂದಾಪುರ ಅಡಗಿದ್ದರು.
ಸದಾ ಮುಸ್ಲಿಂರ ಮೇಲೆ ದ್ವೇಷ ಕಾರೋ ಭಾಷಣ ಮಾಡುವ ಚೈತ್ರಾ ಆಶ್ರಯ ಪಡೆದಿದ್ದು ಮುಸ್ಲಿಂ ಬಾಂಧವರ ಮನೆಯಲ್ಲಿ ಎಂಬುದು ಬಹಿರಂಗವಾಗಿದೆ.
ಸಿಸಿಬಿ ಪೊಲೀಸರು ಅರೆಸ್ಟ್ ಮಾಡ್ತಾರೆ ಎಂದು ತಿಳಿಯುತ್ತಿದ್ದಂತೆ ಅಲರ್ಟ್ ಆಗಿದ್ದ ಚೈತ್ರಾ ಮುಸ್ಲಿಂ ಲೀಗ್ ನ ಅಂಜುಂ ಎಂಬ ಮಹಿಳೆ ಮನೆಯಲ್ಲಿ ಆಶ್ರಯ ಪಡೆದಿದ್ದರು.