ಮಂಗಳೂರು: ಬೆಂಗಳೂರಿನಿಂದ ಮತದಾನಕ್ಕಾಗಿ ಖಾಸಗಿ ಬಸ್ಸಿನಲ್ಲಿ ಊರಿಗೆ ಬರುತ್ತಿದ್ದ ಹಿಂದು ಯುವತಿಗೆ ಅನ್ಯಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಂಡ್ಯ ಬಳಿ ನಡೆದಿದ್ದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಸುಕಿನ ವೇಳೆ ಯವಕನೊಬ್ಬ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವತಿ ಮೇಲೆ ಕೈಮಾಡಿದ್ದಾನೆ. ಆಗ ಯುವತಿ ಸಿಟ್ಟಿಗೆದ್ದು ಬೈದಿದ್ದು ಬಸ್ ಚಾಲಕನ ಗಮನಕ್ಕೆ ತಂದಿದ್ದಾಳೆ. ಆದರೆ ಬಸ್ ಚಾಲಕ. ನಿರ್ಲಕ್ಷ್ಯ ವಹಿಸಿದ್ದ. ಇದರಿಂದ ಮತ್ತೆ ಆ ಯುವಕ, ಯುವತಿ ಮೇಲೆ ಕೈಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ.
ಅಷ್ಟರಲ್ಲಿ ಇತರೇ ಪ್ರಯಾಣಿಕರು ಎಚ್ಚರಗೊಂಡಿದ್ದು ಯುವಕನನ್ನು ಜೋರು ಮಾಡಿದ್ದಾರೆ. ಆರೋಪಿ ಯುವಕ ಬಳಿಕ ಚಾಲಕನ ಬಳಿ ಹೋಗಿ ಕುಳಿತಿದ್ದು ಅರ್ಧದಲ್ಲಿ ಬಸ್ಸನ್ನು ನಿಲ್ಲಿಸಿ ದಾರಿಯಲ್ಲೇ ಇಳಿದು ಹೋಗಿದ್ದಾನೆ. ಬಸ್ಸನ್ನು ಚಾಲಕ ನೇರವಾಗಿ ಮಂಗಳೂರಿಗೆ ತಂದಿದ್ದಾನೆ. ಯುವತಿ ಬಳಿಕ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಗಮನಕ್ಕೆ ತಂದಿದ್ದು ಉಪ್ಪಿನಂಗಡಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಯುವಕನ ಕೈಯಲ್ಲಿದ್ದ ಮೊಬೈಲನ್ನು ಕಿತ್ತುಕೊಂಡಿದ್ದು ಅದರ ಹಿಂಬದಿಯಲ್ಲಿ ಆಧಾರ್ ಕಾರ್ಡ್ ಇತ್ತು. ಅದರ ಆಧಾರದಲ್ಲಿ ಲಾಯ್ಲ ಗ್ರಾಮದ ಇಬ್ರಾಹಿಂ ಎಂದು ಆತನನ್ನು ಗುರುತಿಸಿದ್ದು ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಗಳೂರು- ಬೆಂಗಳೂರು ತೆರಳುವ ಹೆಚ್ಚಿನ ಖಾಸಗಿ ಬಸ್ಸುಗಳಿಗೆ ಚಾಲನಾ ಪರವಾನಗಿಯೇ ಇಲ್ಲ. ಅಲ್ಲದೆ, ಕ್ಲೀನರ್, ನಿರ್ವಾಹಕರೂ ಇರುವುದಿಲ್ಲ. ಅರ್ಧ ದಾರಿಯಲ್ಲಿ ಬಸ್ಸಿಗೇರುವ ಪ್ರಯಾಣಿಕರನ್ನು ಚಾಲಕರು ಹತ್ತಿಸಿಕೊಳ್ಳುತ್ತಿದ್ದು ಆತನಿಂದ ಅರ್ಧ ಹಣ ಪಡೆದು ಟಿಕೆಟ್ ಇಲ್ಲದೆ ಪ್ರಯಾಣಿಸಲು ಅವಕಾಶ ಮಾಡುತ್ತಾರೆ. ಈ ವೇಳೆ, ಅಂಥ ಪ್ರಯಾಣಿಕರ ಗುರುತು ಕೂಡ ಸಿಗುವುದಿಲ್ಲ. ಈ ಪ್ರಕರಣದಲ್ಲಿ ಯುವತಿಗೆ ಕಿರುಕುಳ ನೀಡಿದ ಯುವಕ ಅರ್ಧ ದಾರಿಯಲ್ಲಿ ಹತ್ತಿದ್ದ ವ್ಯಕ್ತಿಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.