Site icon newsroomkannada.com

ದ್ವೇಷ ರಾಜಕೀಯಕ್ಕಾಗಿ ಹಿಂದೂ ಕಾರ್ಯಕರ್ತರ ಗಡಿಪಾರು – ಶಾಸಕ ಕಾಮತ್

ಬೆಂಗಳೂರು: ಬೆಂಗಳೂರಿನಲ್ಲಿ ಸೆರೆ ಸಿಕ್ಕ ಭಯೋತ್ಪಾದಕರನ್ನು ಉಗ್ರರು ಎನ್ನುವಂತಿಲ್ಲ ಎಂದಿದ್ದ ಗೃಹ ಸಚಿವರು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ದ್ವೇಷ ಸಾಧಿಸುವ ಕೆಲಸ ಮಾಡುತಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ಗಡಿಪಾರು ಆದೇಶ ನೀಡಿರುವುದು ರಾಜ್ಯ ಸರಕಾರದ ದ್ವೇಷ ರಾಜಕಾರಣದ ಪರಮಾವಧಿ. ಆ್ಯಂಟಿ ಕಮ್ಯುನಲ್ ವಿಂಗ್ ಮೂಲಕ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಜರಂಗದಳ ಕಾರ್ಯಕರ್ತರ ಗಡಿಪಾರು ಆದೇಶ ವಾಪಸ್ಸು ಪಡೆದು ನ್ಯಾಯಯುತವಾಗಿ ನಡೆದುಕೊಳ್ಳಲಿ ಎಂದು ಶಾಸಕ ಕಾಮತ್ ಕಿಡಿ ಕಾರಿದ್ದಾರೆ.

ಆ್ಯಂಟಿ ಕಮ್ಯುನಲ್ ವಿಂಗ್ ರಚನೆಯ ಮೂಲ ಉದ್ಧೇಶ ಬ್ರಾಂಡ್ ಮಂಗಳೂರಿಗೆ ಕಳಂಕ ತರುವುದಾಗಿದೆ. ಸ್ಥಳೀಯ ಪೊಲೀಸರನ್ನೇ ಸೇರಿಸಿ ಪ್ರತ್ಯೇಕ ವಿಂಗ್ ರಚನೆಯ ಹಿಂದಿನ ಉದ್ಧೇಶವೇನು ? ಅಹಿತಕರ ಘಟನೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಮರ್ಥವಾಗಿಲ್ಲವೇ ? ಇವೆಲ್ಲವನ್ನೂ ಹೊರತುಪಡಿಸಿ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿಸದ ಜಿಲ್ಲೆಯ ಜನತೆಯ ಮೇಲೆ ಸರಕಾರ ಹಗೆ ಸಾಧಿಸುತ್ತಿದೆ. ಇದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

Exit mobile version