main logo

ವಂದೇ ಭಾರತ್‌ ರೈಲು ಟಾಯ್ಲೆಟ್‌ನೊಳಗೆ ಅಡಗಿ ಕುಳಿತ ಪ್ರಯಾಣಿಕ

ವಂದೇ ಭಾರತ್‌ ರೈಲು ಟಾಯ್ಲೆಟ್‌ನೊಳಗೆ ಅಡಗಿ ಕುಳಿತ ಪ್ರಯಾಣಿಕ

ಕಾಸರಗೋಡು: ವಂದೇ ಭಾರತ್‌ ಎಕ್ಸಪ್ರೆಸ್‌ ರೈಲಿಗೆ ಕಲ್ಲು ಹೊಡೆದು ಹಾನಿಗೊಳಿಸುವ ಹಲವು ವಿಕೃತ ಘಟನೆಗಳು ಈಗಾಗಲೇ ವರದಿಯಾಗಿವೆ. ಅದೇ ರೀತಿ ಈಗ ಮತ್ತೊಮ್ಮೆ ವಂದೇ ಭಾರತ್‌ನಲ್ಲಿ
ಟಿಕೆಟ್‌ ರಹಿತ ಪ್ರಯಾಣಿಕನೊಬ್ಬನ ವಿಚಿತ್ರ ಅವಾಂತರ ಈಗ ಸುದ್ದಿಯಾಗಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣಿಕನೊಬ್ಬ ಶೌಚಾಲಯಕ್ಕೆ ಬಾಗಿಲು ಹಾಕಿಕೊಂಡು ಅವಾಂತರ ಸೃಷ್ಟಿಸಿದ್ದಾನೆ.
ಉಪ್ಪಳ ಮಂಗಲ್ಪಾಡಿ ನಿವಾಸಿ ಯುವಕನೊಬ್ಬ ಜೂನ್‌ 25ರಂದು ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ಹೊರಟಿದ್ದ ರೈಲನ್ನೇರಿದ್ದು, ಟಿಕೆಟ್‌ ಪರಿವೀಕ್ಷಕರು ಬರುತ್ತಿದ್ದಂತೆ ತನ್ನಲ್ಲಿ ಟಿಕೆಟ್‌ ಇಲ್ಲದ ಕಾರಣ ಶೌಚಾಲಯದೊಳಗೆ ಪ್ರವೇಶಿಸಿ ಚಿಲಕ ಹಾಕಿಕೊಂಡಿದ್ದಾನೆ.
ಹೊರ ಬರುವಂತೆ ಸಿಬ್ಬಂದಿ ಮನವಿ ಮಾಡಿದರೂ ಆತ ಹೊರಬಂದಿಲ್ಲ. ಕಣ್ಣೂರು ಮತ್ತು ಕೋಯಿಕ್ಕೋಡ್‌ ನಿಲ್ದಾಣಗಳಲ್ಲಿ ಹಲವರು ಬಾಗಿಲು ತೆರಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ರೈಲು ಶೆರ್ನೂರಿಗೆ ತಲುಪಿದಾಗ ಮೂವರು ರೈಲ್ವೆ ಎಂಜಿನಿಯರುಗಳು ಬಾಗಿಲು ತೆರೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಒಡೆದು ಬಾಗಿಲು ತೆರೆದಿದ್ದಾರೆ. ಆತನನ್ನು ರೈಲು ಭದ್ರತಾ ದಳದವರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೊದಲಿಗೆ ನಾನು ಮಹಾರಾಷ್ಟ್ರದವನು ಎನ್ನುತ್ತಿದ್ದ ಯುವಕ ಹಿಂದಿಯಲ್ಲಿ ಮಾತನಾಡುತ್ತಿದ್ದ ಬಳಿಕ ಕೇರಳದವನು ಎಂದು ತಿಳಿಸಿದ್ದಾನೆ.

Related Articles

Leave a Reply

Your email address will not be published. Required fields are marked *

error: Content is protected !!