main logo

ಇಲ್ಲಿದೆ ಸಾವಯವ ಐಸ್ ಕ್ರೀಮ್ – ಇದು ಕೈಲಾರ್ ಕುಟುಂಬದ ಕುಡಿಯ ‘ಆದರ್ಶ’ ಪ್ರಯತ್ನ!

ಇಲ್ಲಿದೆ ಸಾವಯವ ಐಸ್ ಕ್ರೀಮ್ – ಇದು ಕೈಲಾರ್ ಕುಟುಂಬದ ಕುಡಿಯ ‘ಆದರ್ಶ’ ಪ್ರಯತ್ನ!

ಉಪ್ಪಿನಂಗಡಿ: ಐಸ್‌ ಕ್ರೀಂ ಅಂದ್ರೆ ಯಾರಿಗೆ ಇಷ್ಟವಿಲ್ಲ. ಎಳೆಯ ಮಕ್ಕಳಿಂದ ಹಿಡಿದು ಹಿರಿಯ ಜೀವಗಳಿಗೂ ಐಸ್‌ ಕ್ರೀಂ ಅಂದ್ರೆ ಪಂಚಪ್ರಾಣ. ಆದರೆ ನಾವು ಇಷ್ಟಪಟ್ಟು ತಿನ್ನುವ ಐಸ್‌ಕ್ರೀಂ ನಮ್ಮ ಜೀವಕ್ಕೆ ಅಪಾಯಕಾರಿಯಾದರೆ? ಹೌದು ನಾವು ತಿನ್ನೋ ಕಲರ್‌ ಕಲರ್‌ ಕ್ಯಾಂಡಿ, ಐಸ್‌ ಕ್ರೀಂಗಳು ಅಪಾಯಕಾರಿ ಬಣ್ಣಗಳಿಂದ ತುಂಬಿದ್ದು, ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತದೆ. ಇದೇನು ನಮಗೆ ತಿಳಿಯದೇ ಹೋದ ದೊಡ್ಡ ವಿಷಯವೇನಲ್ಲ. ಐಸ್‌ ಕ್ರೀಂ ಕಪ್‌ಗಳಲ್ಲಿಯೇ ಅದರ ಮೂಲದ್ರವ್ಯ ವಿವರಗಳನ್ನು ಹೇಳಿರುತ್ತಾರೆ. ಆದ್ರೆ ಬಾಯಿ ಚಪಲದಿಂದ ನಾವು ಹೋಗ್ಲಿಬಿಡಿ ಅನ್ನೋ ಉದಾಸೀನದಿಂದ ಅದನ್ನೆಲ್ಲ ನಿರ್ಲಕ್ಷ್ಯ ಮಾಡುತ್ತೇವೆ. ಈ ಮೂಲಕ ನಮಗೆ ನಾವೇ ಕಾಯಿಲೆಗಳಿಗೆ ಆಹ್ವಾನ ನೀಡುತ್ತೇವೆ. ಆದರೆ ಉಪ್ಪಿನಂಗಡಿಯ ಯುವಕನೊಬ್ಬ ಜನರ ಹೊಟ್ಟೆ ತಂಪಿಡುವ ಐಸ್‌ ಕ್ರೀಂ ಅನ್ನು ಸಾವಯವ ಪದಾರ್ಥಗಳಿಂದಲೇ ತಯಾರಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಜತೆಗೆ ಯುವಕರು, ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.

ಯಾರು ಇವರು ಆದರ್ಶ ಸುಬ್ರಾಯ: ಉಪ್ಪಿನಂಗಡಿ ಸಮೀಪದ ಇಳಂತಿಲದ ಉತ್ಸಾಹಿ ಯುವಕ ಆದರ್ಶ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಪಿಯು ಮಾಡಿದರು. ಬಳಿಕ ಬೆಂಗಳೂರಿನ ಪೆಸೆಟ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಪೂರೈಸಿ ಬಹುರಾಷ್ಟ್ರೀಯ ಕಾಗ್ನಿಜೆಂಟ್‌ ಕಂಪನಿ ಸೇರಿದಂತೆ ಹಲವು ಕಂಪನಿಗಳಲ್ಲಿ ಮುಂಬೈ, ಚೈನ್ನೈ ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಳಿಕ ಆ ಉದ್ಯೋಗ ತೊರೆದು ಹುಟ್ಟೂರಿನಲ್ಲಿಯೇ ವೋಕಲ್‌ ಫಾರ್‌ ಲೋಕಲ್‌ ಎಂಬ ತತ್ವದಂತೆ ಉದ್ಯಮ ನಡೆಸುತ್ತಿದ್ದಾರೆ.

ಈ ಉದ್ಯಮ ಸ್ಥಾಪನೆಗೆ ಮೂಲ ಪ್ರೇರಣೆ ಆದರ್ಶ ಅವರ ತಂದೆ ಉಪ್ಪಿನಂಗಡಿಗೆ ಸಮೀಪದ ಮೂಲಿಕಾವನದ ಕೃಷಿಕರಾದ ಕೈಲಾರು ಗಣಪತಿ ಭಟ್ಟ. . ಅವರು ಕೃಷಿಕರಾಗಿದ್ದರೂ ಕೂಡ ಪರಂಪರಾಗತವಾಗಿ ಸಕ್ಕರೆ ಕಾಯಿಲೆ, ಕಿಡ್ನಿ ಸ್ಟೋನ್‌, ಮೊದಲಾದ ಕಾಯಿಲೆಗಳಿಗೆ ಹಳ್ಳಿ ಮದ್ದು ನೀಡುತ್ತಿದ್ದು, ಬೆಂಗಳೂರು, ಮುಂಬೈ ಸೇರಿದಂತೆ ಹಲವು ಕಡೆಗಳಿಂದ ತೊಂದರೆ ಇರುವವರು   ಸಕ್ಕರೆ ಕಾಯಿಲೆ ಕಂಟ್ರೋಲ್‌ ಮಾಡಿಕೊಂಡಿದ್ದಾರೆ. ಶುಗರ್‌ ಕಾಯಿಲೆ ಹೊಂದಿರರುವವರು ಇವರಲ್ಲಿ ಮದ್ದು ಪಡೆದ 10 ದಿನಗಳಲ್ಲಿ ಕಾಯಿಲೆ ಕಂಟ್ರೋಲ್‌ ಗೆ ಬಂದಿದ್ದನ್ನು ಹೇಳಿಕೊಂಡ ಹಲವು ಉದಾಹರಣೆಗಳಿವೆ. ಈಗಲೂ ಕೂಡ ಅವರು ಈ ಗಿಡಮೂಲಿಕೆ ಒಷಧಗಳನ್ನು ಜನರಿಗೆ ನೀಡುತ್ತಿದ್ದು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ತಂದೆಯವರೇ ನನ್ನ ಉದ್ಯಮಕ್ಕೆ ಮೂಲ ಪ್ರೇರಣೆ ಎಂದು ಆದರ್ಶ ಸುಬ್ರಾಯ ಹೇಳುತ್ತಾರೆ.

ಹಾಳಾಗುತ್ತಿದ್ದ ಹಲಸಿನ ಹಣ್ಣೆ ಮೂಲ ಪ್ರೇರಣೆ: ಸಾಮಾನ್ಯವಾಗಿ ಕರಾವಳಿಯಲ್ಲಿ ಹಲಸು ಹಣ್ಣಿನ ಸೀಸನ್‌ ಆರಂಭವಾದಾಗ ಒಮ್ಮೆಲೆ ಫಲ ಹೆಚ್ಷಾಗುವ ಕಾರಣ ಅದು ಕೊಳೆತು ಹಾಳಾಗುವುದೇ ಹೆಚ್ಚು. ಇಂತಹ ಹಣ್ಣು ಯಾರಿಗೂ ಬೇಡ ಎಂಬ ಸ್ಥಿತಿ ಆ ಸಮಯದಲ್ಲಿರುತ್ತದೆ. ಈ ಪರಿಸ್ಥಿತಿಯನ್ನು ಅರಿತಿದ್ದ ಆದರ್ಶ ಅವರು ಇಂತಹ ಹಾಳಾಗುವ ಹಲಸಿನ ಹಣ್ಣಿಗೆ ಹೇಗಾದರೂ ಮೌಲ್ಯ ನೀಡಬೇಕು ಎಂಬ ತುಡಿತ ಹೊಂದಿದ್ದರು. ಅದರ ಫಲವಾಗಿ ಹಲಸಿನ ಹಣ್ಣಿನ ಕೆಮಿಕಲ್‌ ರಹಿತ ಸಹಜ ಸಾವಯವ ಐಸ್‌ ಕ್ರೀಂ ರೂಪುಗೊಂಡಿತು. ಆದರ್ಶ ಐಸ್‌ಕ್ರೀಮ್‌ ತಯಾರಿಸಲು ಪೇಟೆಯಿಂದ ಸಕ್ಕರೆ ಮಾತ್ರ ತರುತ್ತಾರೆ. ರಾಸಾಯನಿಕ, ಬಣ್ಣಗಳನ್ನು ಅವರು ಬಳಸುವುದಿಲ್ಲ. ಹಾಲು, ಹಣ್ಣುಗಳ ರಸ ಸೇರಿದಂತೆ ನೈಸರ್ಗಿಕ ವಸ್ತುಗಳಿಂದ ಐಸ್‌ಕ್ರೀಮ್‌ ತಯಾರಿಸುತ್ತಾರೆ.

ಅಡಕೆ ಹಾಳೆಯೆ ಐಸ್‌ ಕ್ರೀಂ ಕಪ್‌: ಸಾಮಾನ್ಯವಾಗಿ ಐಸ್‌ ಕ್ರೀಂ ಕಪ್‌ ಪ್ಲಾಸ್ಟಿಕ್‌ ನಿಂದ ಮಾಡಲ್ಪಟ್ಟಿರುತ್ತದೆ. ಇದನ್ನು ತಿಂದು ಬಿಸಾಡಿದ ನಂತರ ಪ್ರಕೃತಿಯಲ್ಲಿಕರಗದ ಕಾರಣ ದೊಡ್ಡ ಮಟ್ಟದ ತ್ಯಾಜ್ಯವಾಗಿ ಪರಿವರ್ತನೆಯಾಗುತ್ತದೆ. ಇದರ ವಿಲೇವಾರಿಯೂ ಕಷ್ಟ. ಆದರೆ ಆದರ್ಶ ಅವರು ಅಡಕೆ ಹಾಳೆಯಿಂದ ತಯಾರಿ ಮಾಡಿದ ಐಸ್‌ಕ್ರೀಂ ಕಪ್‌ ಬಳಸುತ್ತಿದ್ದು ಸಹಜವಾಗಿ ಪಕೃತಿಯಲ್ಲಿ ಬೆರೆತು ಮಣ್ಣಾಗುತ್ತದೆ. ಇದರಿಂದ ಅಡಕೆ ಹಾಳೆಗೂ ಬೇಡಿಕೆ ಸೃಷ್ಟಿಯಾಗಿ ಕೃಷಿಕರಿಗೂ ನೆರವಾಗಲಿದೆ.

ಬಗೆಬಗೆಯ ಪ್ರಕೃತಿ ಸಹಜ ಐಸ್‌ ಕ್ರೀಂ: ಆದರ್ಶ ಅವರು ಈಗ ಹಲಸು, ಎಳನೀರುಗಂಜಿ, ಮಾವಿನಹಣ್ಣು, ಕಾಟುಮಾವು, ಚಿಕ್ಕು, ಕೊಕ್ಕೊಬೀಜ, ಗಾಂಧಾರಿ ಮೆಣಸು, ಅಡಕೆ, ಪೈನಾಪಲ್‌, ಎಳನೀರಿನ ಗಂಜಿ, ಹಲಸು- ಪಪ್ಪಾಯಿ ಹಣ್ಣು, ರಾಮಫಲ, ಗಾಂಧಾರಿ ಮೆಣಸು, ಜೇನುತುಪ್ಪ ಐಸ್ಕ್ರೀಂ ತಯಾರಿಸುತ್ತಿದ್ದಾರೆ.

ಮಾರ್ಕೆಟಿಂಗ್‌ ಹೇಗೆ: ಯಾವುದೇ ಉತ್ಪನ್ನವಿರಲಿ ಮಾರ್ಕೆಟಿಂಗ್‌ ಇಲ್ಲದೆ ನಡೆಯುವುದೇ ಇಲ್ಲ. ಅದೇ ರೀತಿ ಆದರ್ಶ ಸುಬ್ರಾಯ ಅವರು ತಮ್ಮ ಸಹಜ ಸಾವಯವ ಉತ್ಪನನ್ನಗಳಿಗೆ ತಮ್ಮದೇ ವಿಧಾನದ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಊರ ಜಾತ್ರೆ, ಕೃಷಿ ಮೇಳ, ಆಹಾರ ಮೇಳದಲ್ಲಿ ಸ್ಟಾಲ್‌ ಹಾಕಿ ವ್ಯಾಪಾರ ನಡೆಸುತ್ತಾರೆ. ಕೃಷಿ ಮೇಳ, ಯಂತ್ರಮೇಳಗಳಲ್ಲೂ ಐಸ್‌ಕ್ರೀಮ್‌ ಮಾರಾಟ ಮಾಡುತ್ತಾರೆ.

ಅಮೆಜಾನ್‌ ನಲ್ಲಿ ನಾಟಿ ಔಷಧ:  ಗಣಪತಿ ಭಟ್ಟರು ಮಧುಮೇಹಕ್ಕೆ ನೀಡುವ ಇನ್ಸುಲಿನ್‌ ಎ ಹರ್ಬಲ್‌ ಪೌಡರ್‌, ನೋವಿನ ಎಣ್ಣೆ, ತಲೆಗೂದಲು ಉದುರು ತಡೆ ಎಣ್ಣೆ, ಮೈಗ್ರೇನ್‌ ನಿವಾರಕ ಔಷಧ ನೀಡುತ್ತಿದ್ದು  ಈ ಉತ್ಪನ್ನಗಳನ್ನು. ಅಮೆಝಾನ್‌ನಲ್ಲಿ ನಾಟಿ ಔಷಧಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದಾರೆ.

ನಾನಾ ಹಣ್ಣು ಬಳಕೆ:  ಆದರ್ಶ ಅವರು ತಮ್ಮ ಮನೆಯಲ್ಲೇ ಹಣ್ಣುಗಳಿಂದ ಐಸ್‌ಕ್ರೀಮ್‌ ತಯಾರಿಸುತ್ತಾರೆ. ಅದಕ್ಕೆ ಬೇಕಾದ ಯಂತ್ರೋಪಕರಣಗಳಿವೆ. ಐಸ್‌ಕ್ರೀಮ್‌ ತಯಾರಿಸಲು ಪೇಟೆಯಿಂದ ಸಕ್ಕರೆ ಮಾತ್ರ ತರುತ್ತಾರೆ. ರಾಸಾಯನಿಕ, ಬಣ್ಣಗಳನ್ನು ಅವರು ಬಳಸುವುದಿಲ್ಲ. ಹಾಲು, ಹಣ್ಣುಗಳ ರಸ ಮತ್ತು ಇನ್ನಷ್ಟು ನೈಸರ್ಗಿಕ ವಸ್ತುಗಳಿಂದ ಐಸ್‌ಕ್ರೀಮ್‌ ತಯಾರಿಸುತ್ತಾರೆ. ಎಳನೀರಿನ ಗಂಜಿ, ಪಪಾಯಿ ಹಣ್ಣು, ರಾಮಫಲ, ಖಾರವಾದ ಗುಣಕ್ಕೆ ಹೆಸರಾದ ಗಾಂಧಾರಿ ಮೆಣಸು, ಜೇನುತುಪ್ಪಗಳಿಂದ ಅವರು ತಯಾರಿಸುವ ಸ್ವಾದಿಷ್ಟ ಕ್ರೀಮುಗಳು ಒಂದಕ್ಕಿಂತ ಒಂದು ರುಚಿಯಲ್ಲಿ ಮಿಗಿಲೆನಿಸಿವೆ. ಹಣ್ಣುಗಳ ಪರಿಮಳ ಮನ ಸೆಳೆಯುತ್ತದೆ. ಭಟ್ಟರು ತಯಾರಿಸುವ ಎಲ್ಲ ಐಸ್‌ಕ್ರಿಮ್‌ಗಳಿಗೆ ತಾವು ತಯಾರಿಸಿದ ಹಣ್ಣಿನ ಪಲ್ಪ್‌ ಹಾಗೂ ಸ್ಕ್ವಾಶ್‌ಗಳನ್ನು ಬಳಸುತ್ತಾರೆ.

Related Articles

Leave a Reply

Your email address will not be published. Required fields are marked *

error: Content is protected !!