ಚಿಕನ್ ಪ್ರೀಯರು ಚಿಕನ್ ಟಿಕ್ಕಾವನ್ನು ಮನೆಯಲ್ಲೇ ರೆಡಿ ಮಾಡಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಸರಳ ವಿಧಾನ. ಮೊದಲಿಗೆ ಕೊತ್ತಂಬರಿ ಸೊಪ್ಪು , ಬೆಳ್ಳುಳ್ಳಿ, ಕೆಂಪು ಮೆಣಸಿನ ಕಾಯಿ, ಗರಂ ಮಸಾಲ ಇವುಗಳನ್ನು ಹಾಕಿ ಪೇಸ್ಟ್ ಮಾಡಿ ನಂತರ ಈ ಪೇಸ್ಟ್ ಗೆ ಮೊಸರರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಬೇಕು. ನಂತರ ಚಿಕನ್ ಪೀಸ್ ಗಳನ್ನು ಈ ಮಿಶ್ರಣದಲ್ಲಿ ಹಾಕಿ ಐದರಿಂದ ಆರು ಗಂಟೆ ಫ್ರಿಜ್ ನಲ್ಲಿ ಇಡಿ. ನಂತರ ಟಿಕ್ಕ ಮಾಡುವ ಮೈಕ್ರೋವೇವ್ ಬಿಸಿ ಮಾಡಿಕೊಂಡು ನಂತರ ಚಿಕನ್ ಅನ್ನು ಗ್ರಿಲ್ಡ್ ಸರಳುಗಳಲ್ಲಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಬೇಕು. ಚಿಕನ್ ಟಿಕ್ಕಾದ ಮೇಲೆ ನಿಂಬೆ ರಸ ಹಿಂಡಿ ಕತ್ತರಿಸಿದ ಈರುಳ್ಳಿ ಜೊತೆ ಸವಿಯಿರಿ.