ಮಂಗಳೂರು: ಜುಲೈ 28ರವರೆಗೂ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ನೇತ್ರಾವತಿ, ಕುಮಾರಾಧಾರಾ ನದಿಗಳಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು ಭಕ್ತರಿಗೆ ಸ್ನಾನಘಟ್ಟದ ಕಡೆ ತೆರಳದಂತೆ ಸೂಚನೆ ನೀಡಲಾಗಿದೆ. ಆದರೂ ಕೂಡ ಭಕ್ತರು ಹರಿವ ನೀರಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಕಂಡುಬಂದಿದೆ.
ರಾತ್ರಿ ಸುರಿದ ಮಳೆಗೆ ಶನಿವಾರ ರಾತ್ರಿ ಕಾರ್ಕಳದ ಐತಿಹಾಸಿಕ ಹಿನ್ನಲೆಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಟ್ಟಡದ ಚಂದ್ರಶಾಲೆಯ ಒಂದು ಪಾರ್ಶ್ವ ಭಾಗ ಕುಸಿತಗೊಂಡಿದೆ. ಇತ್ತ ಮಂಗಳೂರಿನ ಲೇಡಿಹಿಲ್ ಬಳಿ ರಾತ್ರಿ ಸುರಿದ ಧಾರಾಕಾರ ಮಳೆಗೆ ನಾರಾಯಣಗುರು ಸರ್ಕಲ್ ಬಳಿ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ಮಂಗಳೂರಿನ ಮುಗೇರ ಕುದು, ಪ್ರದೇಶ ನೆರೆಯಿಂದಾಗಿ ಜಲಾವೃಗೊಂಡಿದೆ. ಫಲ್ಲುಣಿ ನದಿ ನೀರಿನ ಪ್ರಮಾಣ ಹೆಚ್ಚಳವಾಗಿ ಜನವಸತಿ ಪ್ರದೇಶಕ್ಕೆ ನದಿ ನೀರು ನುಗ್ಗಿ ಜನ ಜೀವನ ಅಸವ್ಯಸ್ತವಾಗಿದೆ. ಊರು ಮುಳುಗಡೆಯಾದ ಹಿನ್ನಲೆಯಲ್ಲಿ ಗ್ರಾಮಸ್ಥರುಮಯ ಮೊರೆ ಹೋಗುತ್ತಿದ್ದಾರೆ, ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.