main logo

ಬೆಂಗಳೂರಿನಲ್ಲಿ ಮಳೆಯಾರ್ಭಟ: ಕೆರೆಯಂತಾದ ರಸ್ತೆಗಳು

ಬೆಂಗಳೂರಿನಲ್ಲಿ ಮಳೆಯಾರ್ಭಟ: ಕೆರೆಯಂತಾದ ರಸ್ತೆಗಳು
ನಿನ್ನೆಯಿಂದ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದೆ. ಅದರಂತೆ ಬಿರು ಬಿಸಿಲಿಗೆ ಕಂಗಾಲಾಗಿದ್ದ ಬೆಂಗಳೂರಿಗರು ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ. ಆದರೆ, ದಿಢೀರ್​ ಮಳೆಯಿಂದ ಕೆಲವೆಡೆ ಅದ್ವಾನವಾಗಿದೆ. ಸಿಲಿಕಾನ್​ ಸಿಟಿಯ ಕೊತ್ತನೂರಿನಲ್ಲಿ ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ ಬಿದ್ದಿದೆ. ಇತ್ತ ಐಟಿಐ ಲೇಔಟ್​ನಲ್ಲಿ ಮಳೆಗೆ ಪವರ್ ಕಟ್ ಆಗಿದೆ.
ಸಿಲಿಕಾನ್ ಸಿಟಿಯಲ್ಲಿ ಮೊದಲ ಮಳೆಯಿಂದ ಕೊತ್ತನೂರಿನಲ್ಲಿ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದರ ಜೊತೆಗೆ ಮರವೊದು ಧರೆಗುರುಳಿದಿದ್ದು, ಘಟನೆಯಲ್ಲಿ ಒಂದು ಕಾರಿಗೆ ಹಾನಿಯಾಗಿದೆ.
ಚಕ್ರವರ್ತಿ ಲೇಔಟ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದು, ಪ್ಯಾಲೇಸ್‌ ಗುಟ್ಟಹಳ್ಳಿ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ. ಈ ಹಿನ್ನಲೆ ನಿಧಾನವಾಗಿ ಸಂಚರಿಸಲು ಹೇಳಿದೆ.
ಇನ್ನು ಭಾರೀ ಮಳೆಗೆ ಹೊರ ವರ್ತೂಲ ರಸ್ತೆಯ ಹೊರಮಾವು ಅಂಡರ್ ಪಾಸ್ (ಕೆ.ಆರ್ ಪುರಂ ಕಡೆಯಿಂದ ನಾಗವಾರ ಕಡೆಗೆ) ನಲ್ಲಿ ನೀರು ನಿಂತಿದೆ.
ಸಿಲಿಕಾನ್​ ಸಿಟಿ ಮಳೆಗೆ ಮಾನ್ಯತಾ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತಿದೆ. ಇದರಿಂದ ನಾಗವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಲು ಸೂಚಿಸಲಾಗಿದೆ.
ಇತ್ತ ಮಹಾಲಕ್ಷ್ಮಿ ಪ್ರವೇಶದ್ವಾರದ ಬಳಿ ತೈಲ ಸೋರಿಕೆಯಿಂದಾಗಿ. ಸ್ಯಾಂಡಲ್​ ಸೋಪ್ ಫ್ಯಾಕ್ಟರಿ ಕಡೆಗೆ ವಾಹನಗಳು ನಿಧಾನವಾಗಿ ಸಂಚರಿಸಲು ಟ್ರಾಫಿಕ್​ ಪೊಲೀಸ್​ ತಿಳಿಸಿದೆ.
ಭರ್ಜರಿ ಮಳೆಗೆ ಕಸ್ತೂರಿ ನಗರದ ಕೆಳಸೇತುವೆ ಬಳಿ ರಸ್ತೆಯಲ್ಲಿ ನೀರು ನಿಂತಿದೆ. ಇದರಿಂದ ರಾಮಮೂರ್ತಿನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ.
ಸದಾಶಿವನಗರ ಠಾಣಾ ಸರಹದ್ದಿನ ಬಿ.ಡಿ.ಎ ಡೌನ್ ರಾಂಪ್ ಬಳಿ ರಸ್ತೆಯಲ್ಲಿ ಈ ಹಿಂದೆ ಚಲಿಸಿದ್ದ ವಾಹನಗಳ ಹಳೆಯ ಟೈರ್‍ಗಳಿಂದ ಉಂಟಾಗಿರುವ ದ್ರವರೂಪದ ವಸ್ತುಗಳಿಂದ ದ್ವಿಚಕ್ರವಾಹನಗಳು ಸ್ಕಿಡ್ ಆಗಿ ಬೀಳುತ್ತಿದ್ದು, ಬಿ.ಡಬ್ಲ್ಯೂ.ಎಸ್.ಎಸ್.ಬಿ ರವರ ಸಹಾಯದಿಂದ ರಸ್ತೆಯನ್ನು ಸ್ಚಚ್ಛಗೊಳಿಸಿ ಸುಗಮ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.
ಕೆ ಆರ್ ಪುರ ತೂಗು ಸೇತುವೆ ಡಿವೈಡರ್ ಮೇಲೆ ಇಟ್ಟಿರುವ ಕುಂಡಗಳು ಮಳೆಯಿಂದಾಗಿ ಒಡೆದು ರಸ್ತೆ ಮೇಲೆ ಬಿದ್ದಿದ್ದು, ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಪೊಲೀಸ್​ ಅಧಿಕಾರಿ ಮತ್ತು ಸಿಬ್ಬಂದಿಯವರು ಮಣ್ಣಿನ ಕುಂಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಸೂಕ್ತ ಅನುಕೂಲ ಮಾಡಿಕೊಟ್ಟಿದ್ದಾರೆ.

 

Related Articles

Leave a Reply

Your email address will not be published. Required fields are marked *

error: Content is protected !!