newsroomkannada.com

ಪ್ರಕೃತಿ ಪ್ರಿಯರ heart ಇದೇ ನೋಡಿ

ಹೃದಯದ ಆಕಾರದಲ್ಲಿರುವ ಭಾಮಿಕೊಂಡ ಎಲ್ಲಿದೆ ಗೊತ್ತಾ?

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಸ್ಥಳ ಭಾಮಿಕೊಂಡ ಎನ್ನುವ ಪ್ರದೇಶ ಲವ್‌ ಆಕಾರದ ಗದ್ದೆಯಿಂದಲೇ ಫೇಮಸ್‌ ಆಗಿದೆ. ಇಲ್ಲಿ ವಾಸವಾಗಿರುವ ಗ್ರಾಮಸ್ಥರುಕಡಿದಾದ ಪರ್ವತವನ್ನು ಹಂತ ಹಂತಗಳಾಗಿ ವಿಂಗಡಣೆ ಮಾಡಿ ಈ ಹಿಂದೆ ಅಲ್ಲಿ ಭತ್ತ ಕೃಷಿ ಮಾಡುತ್ತಿದ್ದರು. ಈ ಪ್ರದೇಶದ ತುತ್ತ ತುದಿಯಲ್ಲಿರುವ ಗದ್ದೆ ಬಹುದೂರದಿಂದ ಲವ್‌ ಆಕಾರದಲ್ಲಿ ಕಾಣುತ್ತಿದ್ದು, ಚಾರಣಿಗರ ಕಣ್ಮನ ಸೆಳೆಯುವ ಸ್ಥಳವಾಗಿದೆ. ಬಾಮಿಕೊಂಡ ಪ್ರದೇಶವು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೇ ಗ್ರಾಮದಲ್ಲಿದ್ದು, ಬಾಳ್ಗಲ್‌ ನಿಂದ ಸುಮಾರು ಏಳು ಕಿಲೋಮೀಟರ್‌ ದೂರದಲ್ಲಿರುವ ಈ ಸ್ಥಳವನ್ನು ಚಾರಣ ಅಥವಾ ಜೀಪ್‌ ಗಳ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ಮೂರು ಕುಟುಂಬಗಳು ವಾಸ ಮಾಡುತ್ತಿದ್ದು,
ಆರು ಎಕರೆ ಪ್ರದೇಶದಲ್ಲಿ ಈ ಹಿಂದೆ ಭತ್ತ ಕೃಷಿ ಮಾಡುತ್ತಿದ್ದರು. ಆದರೆ ಈಗ ವಿವಿಧ ಕಾರಣಗಳಿಂದ ಭತ್ತ ಕೃಷಿಯನ್ನು ಮಾಡುತ್ತಿಲ್ಲ. ಈ ಸ್ಥಳ ಚಾರಣಕ್ಕೆ ಸುಂದರವಾದ ಪ್ರದೇಶವಾಗಿದೆ.

ಇಲ್ಲಿಗೆ ಕುದುರೆಮುಖ ಪಿಕ್, ಮುಳ್ಳೋಡಿ, ಸಂಸೆ ಮುಂತಾದ ಪ್ರದೇಶಗಳು ಕಾಣಸಿಗುತ್ತವೆ. ಸುಂದರವಾದ ಹಸಿರು ಪ್ರದೇಶಗಳಲ್ಲಿ ಕಂಡುಬರುವ ಹೆಂಚಿನ ಮನೆಗಳು ಕಣ್ಮನ ಸೆಳೆಯುತ್ತವೆ. ಭಾಮಿಕೊಂಡ ಇಂಟರ್ನೆಟ್ಟಿನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಸ್ಥಳಗಳಲ್ಲೊಂದಾಗಿದೆ.

ಯಾಕೆ ಆ ಹೆಸರು ಬಂತು ಗೊತ್ತಾ: ಬಾಮಿಕೊಂಡಕ್ಕೆ ಸಾಗುವ ದಾರಿಯಲ್ಲಿ ಕಂಡು ಬರುವ ಒಂದು ಹಳ್ಳ/ನದಿ ಕಾಣಸಿಗುತ್ತದೆ. ಅಲ್ಲಿ ನೀರು ಹರಿದು ಹರಿದು ಹೋಂಡಾ ಆಗಿದೆ. ಆ ಪ್ರದೇಶವನ್ನು ಬಾವಿಯೆಂದು ಕರೆಯಲ್ಪಡುತ್ತದೆ. ಅದನ್ನು ಕೊಂಡ ಅಥವಾ ಕೊಡ ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಭಾವಿಕೊಂಡ, ಭಾಮಿಕೊಂಡ ಹೆಸರು ಬಂದಿದೆ. ಈ ಸ್ಥಳ ಕರ್ನಾಟಕದಲ್ಲಿ ಅತಿ ಎತ್ತರದ ಭತ್ತದ ಕೃಷಿ ಮಾಡುವ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ಗದ್ದೆ ಮಾಲೀಕರಾದ ಬೋಬೇಗೌಡ ಅವರು 60 ವರ್ಷಗಳಿಂದ ಭತ್ತದ ಕೃಷಿಯ ಪ್ರದೇಶದಲ್ಲಿ ನಡೆಸುತ್ತಿದ್ದರು. ಅವರು ಮೂರು ಜನ ಸಹೋದರರು ಎರಡು ಎಕರೆಯಂತೆ ಮೂವರು ಆರು ಎಕರೆಯಲ್ಲಿ ಕೃಷಿ ಕಾರ್ಯ ನಡೆಸುತ್ತಿದ್ದರು. ಹಲವು ವರ್ಷಗಳ ಹಿಂದೆ ಜೆಸಿಬಿ, ಹಿಟಾಚಿಗಳ ಸಹಾಯವಿಲ್ಲದೆ, ಕೇವಲ ಹಾರೆ, ಪಿಕ್ಕಾಸಿಗಳ ಮೂಲಕವೇ ಗದ್ದೆ ನಿರ್ಮಾಣ ಮಾಡಿದ್ದಾರೆ.

Exit mobile version