ಐಸಿಎಂಆರ್ ಯುವಪೀಳಿಗೆಯವರಿಗೆ ಹೆಚ್ಚಿನ ಹೃದಯಾಘಾತವಾಗುತ್ತಿರುವ ಸಮಗ್ರ ಅಧ್ಯಯನ ನಡೆಸಿದೆ. ಅವರ ವರದಿಯ ಪ್ರಕಾರ, ಕೋವಿಡ್ -19 ನಿಂದ ಗಂಭೀರವಾಗಿ ಪ್ರಭಾವಿತರಾದವರು ಹೃದಯಾಘಾತವನ್ನು ತಪ್ಪಿಸಲು, ಎರಡು ವರ್ಷಗಳ ಕಾಲ ಒತ್ತಡದ ಕೆಲಸಗಳು, ರನ್ನಿಂಗ್ ಮತ್ತು ಶ್ರಮದಾಯಕ ವ್ಯಾಯಾಮವನ್ನು ತಪ್ಪಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಸಲಹೆ ನೀಡಿದ್ದಾರೆ.
ಗುಜರಾತ್‌ನಲ್ಲಿ ನವರಾತ್ರಿಯ ವೇಳೆ ಗರ್ಬಾ ನೃತ್ಯ ಮಾಡುವಾಗ 17 ವರ್ಷದ ಯುವಕ ಖೇಡಾ ಜಿಲ್ಲೆಯ ಕಪದ್ವಾಂಜ್‌ನಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಅಹಮದಾಬಾದ್, ನವಸಾರಿ ಮತ್ತು ರಾಜ್‌ಕೋಟ್‌ನಲ್ಲಿ ಇದೇ ರೀತಿಯ ಘಟನೆಗಳು ಬೆಳಕಿಗೆ ಬಂದಿದ್ದವು.
ವಡೋದರಾ ಜಿಲ್ಲೆಯ ದಭೋಯ್‌ನಲ್ಲಿ 13 ವರ್ಷದ ಬಾಲಕ, 28 ವರ್ಷದ ಯುವಕ ಮತ್ತು 55 ವರ್ಷದ ವ್ಯಕ್ತಿಯೊಬ್ಬ ಗರ್ಬಾ ನೃತ್ಯ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.