main logo

ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಪ್ರಥಮ ಸಂಸದ ಕಟೀಲ್

ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಪ್ರಥಮ ಸಂಸದ ಕಟೀಲ್

ಮಂಗಳೂರು: ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಚರ್ಚೆಗಳೂ ಸಹ ಗರಿಗೆದರಿದೆ.

ಒಂದು ಮೂಲಗಳ ಪ್ರಕಾರ ಹ್ಯಾಟ್ರಿಕ್ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೇ ಈ ಬಾರಿ ಪಕ್ಷ ಮಣೆ ಹಾಕುವ ಸಾಧ್ಯತೆಗಳು ದಟ್ಟವಾಗಿದೆ. ಹಾಲಿ ಸಂಸದರೂ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಬಗೆಗಿನ ಪರ ವಿರೋಧದ ಚರ್ಚೆಯ ನಡುವೆ ನಳಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಗುರಿ ಮುಟ್ಟಿದ ರಾಜ್ಯದ ಸಂಸದರ ಪೈಕಿ ಮಂಗಳೂರು ಸಂಸದರು ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಸಂಸದರ ಆದರ್ಶ ಗ್ರಾಮದ ಯೋಜನಾ ನಿರ್ದೇಶಕರು ಹೇಳಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಪ ಗ್ರಾಮವನ್ನು ಸಂಸದರು ಆಯ್ಕೆ ಮಾಡಿಕೊಂಡಿದ್ದು ಈ ಗ್ರಾಮದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ನೆಟ್ವರ್ಕ್ ವ್ಯವಸ್ಥೆ ಸೇರಿದಂತೆ 55 ಕೋಟಿ ರೂಪಾಯಿ ಅನುದಾನವನ್ನು ಒಂದು ಗ್ರಾಮಕ್ಕೆ ಒದಗಿಸಿ ಆ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದು, ಸತತ ನಾಲ್ಕನೇ ಬಾರಿ ಸಂಸದ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಳಿನ್ ಕುಮಾರ್ ಕಟೀಲ್ ಅವರ ಉಮೇದುವಾರಿಕೆಗೆ ಇನ್ನಷ್ಟು ಬಲ ತುಂಬಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!