ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಸ್ಪರ್ಧೆ ಭಾರಿ ಕುತೂಹಲ ಕೆರಳಿಸಿದೆ. ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮ ಆರಂಭವಾಗಿ ಆರು ವಾರಗಳು ಉರುಳಿವೆ. ಆರನೇ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಇದ್ದು, ಶನಿವಾರದ ಸಂಚಿಕೆಯಲ್ಲಿ ಔಟ್ ಆದ ಸ್ಪರ್ಧಿ ಇಶಾನಿ.
ದಸರಾ ಹಬ್ಬದ ಪ್ರಯುಕ್ತ ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಮೂರನೇ ವಾರ ಯಾವುದೇ ಎಲಿಮಿನೇಷನ್ ನಡೆಯಲಿಲ್ಲ. ಐದನೇ ವಾರ ತಾವು ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಬೇಕು ಎಂದು ವರ್ತೂರು ಸಂತೋಷ್ ಹಠ ಹಿಡಿದಿದ್ದರು. ಹೀಗಾಗಿ, ಅಂದೂ ಎಲಿಮಿನೇಷನ್ ಪ್ರಕ್ರಿಯೆಯನ್ನ ತಡೆಹಿಡಿಯಲಾಗಿತ್ತು. ಬಳಿಕ ಅವರ ತಾಯಿ ಮಂಜುಳ ಬಂದು ಮಾತನಾಡಿದ್ಮೇಲೆ ‘ಬಿಗ್ ಬಾಸ್’ ಮನೆಯಲ್ಲೇ ಉಳಿಯಲು ವರ್ತೂರು ಸಂತೋಷ್ ಮನಸ್ಸು ಮಾಡಿದರು. ಹೀಗಾಗಿ ಆರನೇ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಮಾಡಲಾಗುತ್ತಿದೆ. ಶನಿವಾರದ ಸಂಚಿಕೆಯಲ್ಲಿ ಒಬ್ಬರು, ಭಾನುವಾರದ ಸಂಚಿಕೆಯಲ್ಲಿ ಮತ್ತೊಬ್ಬರು ಔಟ್ ಆಗಲಿದ್ದಾರೆ. ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯ ಆರಂಭದಲ್ಲೇ.. ಎಲ್ಲಾ ಸ್ಪರ್ಧಿಗಳಿಗೂ ಕಿಚ್ಚ ಸುದೀಪ್ ಶಾಕ್ ಕೊಟ್ಟರು. ‘’ಪ್ರತಿ ಬಾರಿ ಸಂಚಿಕೆಯ ಲಾಸ್ಟ್ನಲ್ಲಿ ಎಲಿಮಿನೇಷನ್ ಮಾಡುತ್ತೇವೆ. ಆದರೆ, ಈ ವಾರ ಹಾಗಾಗಲ್ಲ. ಹತ್ತು ಸೀಸನ್ಗಳಲ್ಲಿ ಇದೇ ಮೊದಲ ಬಾರಿಗೆ ಮೊದಲ ಸೆಗ್ಮೆಂಟ್ನಲ್ಲೇ ಎಲಿಮಿನೇಷನ್ ಮಾಡುತ್ತೇವೆ’’ ಎಂದು ಕಿಚ್ಚ ಸುದೀಪ್ ಹೇಳಿದರು. ಸ್ಪರ್ಧಿಗಳೆಲ್ಲಾ ಶಾಕ್ ಆದಾಗ ‘‘ಹೇಗಿತ್ತು ನಮ್ ಜೋಕ್’’ ಅಂತ್ಹೇಳಿ ಕಿಚಾಯಿಸಿದರು ಸುದೀಪ್.