main logo

ಹುಂತಗೋಳಿ ಅಮಾವಾಸ್ಯೆ ಜಾತ್ರಾ ಮಹೋತ್ಸವ

ಹುಂತಗೋಳಿ ಅಮಾವಾಸ್ಯೆ ಜಾತ್ರಾ ಮಹೋತ್ಸವ

ದಿವ್ಯ ಶಕ್ತಿಯನ್ನು ಹೊಂದಿರುವ ಹುಂತನಗೋಳಿ ದುರ್ಗಾಪರಮೇಶ್ವರಿ ಅಮ್ಮನವರ ಕಾರಣಿಕ ಶಕ್ತಿಯನ್ನು ವರ್ಣಿಸಲು ಅಸಾಧ್ಯವಾದ್ದು

ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ಹುಂತನಗೋಳಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಮಂಗಳಾರತಿ ಸೇವೆ,ಹುತ್ತಕ್ಕೆ ಹೂ ಸುತ್ತುವ ಸೇವೆ,ತುಲಾಭಾರ ಸೇವೆ,ಮುತ್ತೈದೆಯರ ಆರಾಧನೆ,ಸುತ್ತಕ್ಕಿ ಸೇವೆ ಹಾಗೂ ಮಗುವಿನ ತೊಟ್ಟಿಲು ಸೇವೆ,ಸಾರ್ವಜನಿಕ ಅನ್ನ ಸಂತರ್ಪಣೆ ಸೇವೆ ಜರುಗಿತು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವಿಯ ಪ್ರಸಾದವನ್ನು ಸ್ವೀಕರಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಮಂಜುನಾಥ ಹೆಬ್ಬಾರ್ ಮಾತನಾಡಿ,ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಹುಂತಗೋಳಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಕಾರಣಿಕ ಶಕ್ತಿ ಅಪಾರವಾದ್ದದು.ಚರ್ಮ ರೋಗ,ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಸಹೃದಯಿವುಳ್ಳವಳು.ಏಳ್ಳಮಾವಾಸ್ಯೆ ಜಾತ್ರೆಯನ್ನು ಅಮ್ಮನವರ ಸನ್ನಿಧಾನದಲ್ಲಿ ವಿಶೇಷವಾದ ರೀತಿಯಲ್ಲಿ ಆಚರಿಸಲಾಗುತ್ತಿದೆ.ಕಷ್ಟಕಾಲದಲ್ಲಿ ಹೇಳಿಕೊಂಡಿರುವ ಹರಕೆಯನ್ನು ಭಕ್ತರು ಜಾತ್ರೆ ಸಮಯದಲ್ಲಿ ಸಮರ್ಪಿಸಿ ಹೋಗುತ್ತಾರೆ ಎಂದು ಹೇಳಿದರು.ಭಕ್ತಿಯಿಂದ ಬೇಡಿದರೆ ಭಕ್ತರ ಬೇಡಿಕೆಯನ್ನು ತಾಯಿ ಈಡೇರಿಕೆ ಮಾಡುತ್ತಾಳೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್ ಮಾತನಾಡಿ,ಬಹಳಷ್ಟು ಹಳೆಯದಾದ ಕಟ್ಟಡವನ್ನು ಹೊಂದಿರುವ ದೇವಸ್ಥಾನವನ್ನು ಇತ್ತೀಚಿಗೆ ಸುಮಾರು 80 ಲಕ್ಷ.ರೂ ಅನುದಾನದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.ಕಾಂಡಚಿನಲ್ಲಿರುವ ದೇವಾಲಯದ ಸಂಪರ್ಕ ರಸ್ತೆ ಮಣ್ಣಿನಿಂದ ಕೂಡಿದೆ,ಸೌಪರ್ಣಿಕಾ ನದಿ ತೀರ ದಡವೂ ಶಿಥಿಲಗೊಂಡಿದೆ,ಆವರಣದ ಗೋಡೆ ನಿರ್ಮಾಣ,ಸಭಾಭವನ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ಬಾಕಿ ಇದ್ದು ದೇವಸ್ಥಾನವನ್ನು ಅಭಿವೃದ್ಧಿಗೊಳಿಸಲು ಜನಪ್ರತಿನಿಧಿಗಳು,ದಾನಿಗಳು,ಭಕ್ತರು ಮುಂದೆ ಬರಬೇಕು ಎಂದು ವಿನಂತಿಸಿಕೊಂಡರು.

ಶಾಂತರಾಮ ಶೆಟ್ಟಿ ಮಾತನಾಡಿ,ಎಳ್ಳಮಾವಾಸ್ಯೆ ದಿನದಂದು ದೇವಾಲಯದಲ್ಲಿ ವಿಶೇಷವಾದ ಪೂಜೆ ಪುರಸ್ಕಾರಗಳು ನೆರವೇರುತ್ತದೆ.ಮಕರ ಸಂಕ್ರಮಣದಲ್ಲಿ ವಿಶೇಷ ಪೂಜೆ,ದೀಪದ ಅಮಾವಾಸ್ಯೆ ದಿನವು ಕೂಡ ಪೂಜೆ ನಡೆಯುತ್ತದೆ ಎಂದರು.ಕಷ್ಟ ಬಂದಾಗ ದೇವಿ ಬಳಿಯಲ್ಲಿ ಬೇಡಿದರೆ ಸುಖವನ್ನು ತಾಯಿ ನೀಡುತ್ತಾಳೆ.ದಿವ್ಯ ಶಕ್ತಿಯನ್ನು ಹೊಂದಿರುವ ಹುಂತನಗೋಳಿ ದುರ್ಗಾಪರಮೇಶ್ವರಿ ಅಮ್ಮನವರ ಕಾರಣಿಕ ಶಕ್ತಿಯನ್ನು ವರ್ಣಿಸಲು,ವಿವರಿಸಲು ಅಸಾಧ್ಯವಾದದು ಎಂದರು.

ಸ್ಥಳೀಯರಾದ ಶಂಕರ ಗೌಡ ಮಾತನಾಡಿ,ಎಳ್ಳಮಾವಾಸ್ಯೆ ದಿನ 10 ರಿಂದ 12 ಸಾವಿರ ಜನ ಸೇರುತ್ತಾರೆ,ಅನ್ನದಾನ ಸೇವೆ,ತುಲಾಭಾರ ಸೇವೆ,ಸುತ್ತಕ್ಕಿ ಸೇವೆ,ಮಂಗಳಾರತಿ ಸೇವೆ ಜರುತ್ತದೆ.ದೇವಾಲಯಕ್ಕೆ ಸರಿಯಾದ ಸಂಪರ್ಕ ರಸ್ತೆ ವ್ಯವಸ್ಥೆ ಕೂಡ.ಬಹಳಷ್ಟು ಇತಿಹಾಸ ಮತ್ತು ಹಿನ್ನೆಲೆಯನ್ನು ಹೊಂದಿರುವ ದೇವಾಲವನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಸಿಂಗಧೂರು,ಕೊಲ್ಲೂರು ದೇವಸ್ಥಾನದ ಮಾದರಿಯಲ್ಲಿ ದೇವಾಲಯವನ್ನು ಅಭಿವೃದ್ಧಿಗೊಳಿಸಿದರೆ ಭಕ್ತರ ಸಂಖ್ಯೆ ವೃದ್ಧಿ ಆಗವುದರ ಜತೆಗೆ ಊರಿನ ಅಭಿವೃದ್ಧಿ ಕೂಡ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀಕಾಂತ ಹೆಬ್ಬಾರ್, ದೇವಯ್ಯ ನಾಯ್ಕ್,ಶಂಕರ ಗೌಡ,ಕುಪ್ಪಯ್ಯ ಪೂಜಾರಿ,ರಾಮ ನಾಯ್ಕ್,ಗ್ರಾಮಸ್ಥರು ಉಪಸ್ಥಿತರಿದ್ದರು.ಚಂಪ ಷಷ್ಠಿ ಮಹೋತ್ಸವ ದಿನದಂದು ಅಮ್ಮನವರ ಸನ್ನಿಧಾನದಲ್ಲಿ ಷಷ್ಠಿ ಸೇವೆ ನಡೆಯುವುದು ಇಲ್ಲಿನ ವಿಶೇಷವಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!