Site icon newsroomkannada.com

40 ಇಸ್ರೇಲ್‌ ಮಕ್ಕಳ ಶಿರಚ್ಚೇಧ ಮಾಡಿದ ಹಮಾಸ್‌ ಉಗ್ರರು

ಜೆರುಸಲೇಮ್: ಇಸ್ರೇಲ್‌ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ವಿರುದ್ಧ ಪ್ರತೀಕಾರಕ್ಕೆ ಹಮಾಸ್ ಉಗ್ರರು 40 ಇಸ್ರೇಲ್ ಮಕ್ಕಳ ಶಿರಚ್ಛೇಧ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಈ ಕುರಿತು ವಿಡಿಯೋಗಳು ಬಹಿರಂಗವಾಗಿದೆ.

ಇಸ್ರೇಲ್‌ ಒಳ ನುಗ್ಗಿ ಹಮಾಸ್ ಉಗ್ರರು ಶನಿವಾರದಿಂದ ನಡೆಸಿರುವ ಭೀಕರ ಹತ್ಯೆಯಲ್ಲಿ 40 ಮಕ್ಕಳ ಶಿರಚ್ಚೇಧ ಮಾಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಸ್ರೇಲ್ ಸೈನಿಕರು ಕಾರ್ಯಾಚರಣೆಯಲ್ಲಿ ಹಲವು ಭಾಗದಲ್ಲಿ ಮಕ್ಕಳು, ಪೋಷಕರು ಸೇರಿದಂತೆ ಕುಟುಂಬಗಳನ್ನೇ ಹತ್ಯೆ ಮಾಡಿರುವ ಘಟನೆಗಳೇ ಎದುರಾಗುತ್ತಿದೆ. ಇಸ್ರೇಲ್ ಮನೆಗಳ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳೇ ಇದ್ದಾರೆ.

ಎಳೆ ಹಸಗೂಸು, ಒಂದು ವರ್ಷದಿಂದ 14 ವರ್ಷದ ಮಕ್ಕಳನ್ನೂ ಬಿಡದೇ ಶಿರಚ್ಛೇಧ ಮಾಡಲಾಗಿದೆ. ಇನ್ನು ಹೆಣ್ಣು ಮಕ್ಕಳು, ಮಹಿಳೆಯರು ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾವೇ ಹಮಾಸ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಇನ್ನು ಈ ಮಕ್ಕಳನ್ನು ಹಮಾಸ್ ಉಗ್ರರು ಶಿರಚ್ಚೇಧ ಮಾಡಿದ್ದಾರೆ.

900 ಇಸ್ರೇಲ್ ನಾಗರೀಕರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆ. 2,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ ಒಳಗೆ ಹಮಾಸ್ ಉಗ್ರರು ನಡೆಸಿದ ಭೀಕರತೆ ಅಮೆರಿಕ ಕೆರಳಿದೆ. ಅಮೆರಿಕ ಆಪರೇಶನ್ ಫೋರ್ಸ್ ಇದೀಗ ಇಸ್ರೇಲ್‌ಗೆ ಬಂದಿಳಿದಿದೆ. ಕಾರ್ಯಾಚರಣೆ ತೀವ್ರಗೊಳ್ಳುತ್ತಿದೆ. ಗಾಜಾದ ಮೇಲಿನ ದಾಳಿ ಜೊತೆಗೆ ಇಸ್ರೇಲ್ ಒಳಗಿರುವ ಹಮಾಸ್ ಉಗ್ರರ ಸದೆಬಡಿಯಲು ಕಾರ್ಯಾಚರಣೆ ತೀವ್ರಗೊಂಡಿದೆ.

Exit mobile version