Site icon newsroomkannada.com

ನೋಡಿ ನಾನೀಗ ಆಕಾಶದಲ್ಲಿ ಹಾರ್ತಾ ಇದೀನಿ: ಹಾಸನಾಂಬೆ ಜಾತ್ರೆಯಲ್ಲಿ ಅಜ್ಜಿಯ ಜಬರ್ದಸ್ತ್‌ ಸಾಹಸ

ಹಾಸನ: ಹಾಸನದಲ್ಲಿ 76ರ ಇಳಿ ವಯಸ್ಸಿನ ವೃದ್ಧೆಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡಿ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಹಾಸನಾಂಬ ದರ್ಶನಕ್ಕೆ ಬಂದಿದ್ದ ಅಜ್ಜಿಯ ಸಾಹಸ ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ಇಂದು ಹಾಸನಾಂಬೆ ದೇವಿ ದರ್ಶನದ ಮೂರನೇ ದಿನ. ಹೀಗಾಗಿ ತಾಯಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹಾಸನಾಂಬ ಉತ್ಸವ ಬೂವನಹಳ್ಳಿ ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಭಾಗಿಯಾಗಿ ನಿಬ್ಬೆರಗು ಮೂಡಿಸಿದ್ದಾರೆ.

ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಅನೇಕ ಯುವಕ, ಯುವತಿಯರು ಭಾಗವಹಿಸುತ್ತಿದ್ದು 76 ವರ್ಷದ ಅಜ್ಜಿ ಕೂಡ ಪ್ಯಾರಾಗ್ಲೈಡಿಂಗ್ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ ಅಜ್ಜಿಯ ಸಾಹಸಕ್ಕೆ ಜನ ಬೆರಗಾಗಿದ್ದಾರೆ.

Exit mobile version