ನವದೆಹಲಿ: ಗೂಗಲ್ ಜನಸಾಮಾನ್ಯರ ಉಪಯೋಗಕ್ಕಾಗಿಯೇ ಅಪ್ಲಿಕೇಶನ್ ಒಂದನ್ನು ಸಿದ್ದಗೊಳಿಸಿದ್ದು, ಈ ಸೂಪರ್ Super App ‘A’) ಅನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಿಡುಗಡೆ ಮಾಡಿದರು.
ಈ ಅಪ್ಲಿಕೇಶನ್ ಕೃತಕ ಬುದ್ಧಿ ಮತ್ತೆ ಉಪಯೋಗಿಸಿ ತಯಾರಿಸಲಾಗಿದ್ದು, ಇದನ್ನು ಲಾಗಿನ್ ಆಗಲು ನೀವು ಮೊದಲಿಗೆ ಮೊಬೈಲ್ ಸಂಖ್ಯೆ ದಾಖಲು ಮಾಡಬೇಕಿದೆ. ಈ ಆಪ್ ನಿಮಗೆ ಸರ್ಕಾರಿ ಯೋಜನೆ ಮತ್ತು ಇತರ ಎಲ್ಲ ಸೇವೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ.
ಆಕ್ಸಿಸ್ ಮೈ ಇಂಡಿಯಾ ಸಂಸ್ಥೆ ಮತ್ತು ಗೂಗಲ್ ಸಹಯೋಗದಲ್ಲಿ ಈ ತಂತ್ರಾಂಶ ರಚನೆಯಾಗಿದ್ದು, ಈ ಆಪ್ ವಾಯ್ಸ್ ಆಕ್ಟಿವೇಟೆಡ್ ಪರ್ಸನಲ್ ಅಸಿಸ್ಟೆಂಟ್ ಸೌಲಭ್ಯವನ್ನು ಹೊಂದಿದೆ. ಈ ಆಪ್ ಮೂಲಕ ನೀವು ಆಯುಷ್ಮಾನ್ ಭಾರತ್, ಕೃಷಿ, ಸರ್ಕಾರಿ ಯೋಜನೆಗಳು, ಉದ್ಯೋಗ ಇತ್ಯಾದಿಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆಯಬಹುದು.
ಉದಾಹರಣೆಗೆ, ಈ ಅಪ್ಲಿಕೇಶನ್‌ನ ಸಹಾಯದಿಂದ ನಮ್ಮ ಸುತ್ತಮುತ್ತ ಯಾವ ಆಯುಷ್ಮಾನ್ ಭಾರತ್ ಆಸ್ಪತ್ರೆಗಳಿವೆ ಎಂಬುದನ್ನು ಸಹ ನಾವು ತಿಳಿದುಕೊಳ್ಳಬಹುದು. ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಎಲ್ಲಿ ಸಿಗುತ್ತದೆ ಎಂಬುದನ್ನು ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದು. ಈ ಸೂಪರ್ ಆಪ್ ನ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಬಹು ಭಾಷಾಗಳಿಗೆ ಅನ್ವಯವಾಗುವಂತೆ ತಯಾರಿಸಲಾಗಿದೆ. ಈ ಅಪ್ಲಿಕೇಶನ್ 13 ವಿವಿಧ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದನ್ನು ಸಾಮಾನ್ಯ ಜನರ ಅನುಕೂಲಕ್ಕಾಗಿ ಮಾಡಲಾಗಿದೆ. ಅಂದರೆ ನಮಗೆ ಇಷ್ಟವಾದ ಭಾಷೆಯಲ್ಲಿ ಮಾಹಿತಿ ಪಡೆಯಬಹುದು.
Super app ‘a’ announced.
This digital platform has the power to empower more than a billion people🇮🇳. pic.twitter.com/k7hjW8FCJI— Ashwini Vaishnaw (@AshwiniVaishnaw) October 20, 2023