main logo

ಗುಡ್‌ ನ್ಯೂಸ್‌: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ

ಗುಡ್‌ ನ್ಯೂಸ್‌: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ

ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬೈನಲ್ಲಿ ಸೋಮವಾರ ನಡೆದ ಐಒಸಿಯ 141ನೇ ಅಧಿವೇಶನದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಇದಾದ ಬಳಿಕ 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಈ ಮೂಲಕ 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳಿದೆ.

ಅಕ್ಟೋಬರ್ 15 ರಿಂದ ಮುಂಬೈನಲ್ಲಿ ಐಒಸಿಯ 141 ನೇ ಅಧಿವೇಶನ ನಡೆಯುತ್ತಿದೆ. ಸಮಿತಿಯ ಈ ಸಭೆ ಅಕ್ಟೋಬರ್ 17 ರವರೆಗೆ ನಡೆಯಲಿದೆ. ಸಮಿತಿಯ ಈ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಐಒಸಿ ಸದಸ್ಯೆ ನೀತಾ ಅಂಬಾನಿ, ‘ಈ ನಿರ್ಧಾರ ಭಾರತಕ್ಕೆ ಹೆಮ್ಮೆಯ ವಿಷಯ. ನಿರ್ಧಾರಕ್ಕಾಗಿ IOC ಗೆ ಧನ್ಯವಾದಗಳು. ಇದು ಒಲಿಂಪಿಕ್ಸ್ ಆಂದೋಲನವನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028 ರ ಕಾರ್ಯಕ್ರಮದಲ್ಲಿ ಕ್ರಿಕೆಟ್‌ನ T20 ಸ್ವರೂಪವನ್ನು ಅಧಿಕೃತವಾಗಿ ಸೇರಿಸಲು IOC ಇಂದು ನಿರ್ಧರಿಸಿದೆ ಎಂಬುವುದು ಉಲ್ಲೇಖನೀಯ. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೋಮವಾರದಂದು ಪುರುಷರ ಮತ್ತು ಮಹಿಳೆಯರ ಸ್ಪರ್ಧೆಗಳನ್ನು ಸೇರಿಸಲು ಮತ ಚಲಾಯಿಸಿದೆ, ಜೊತೆಗೆ ನಾಲ್ಕು ಇತರರನ್ನು LA ಗೇಮ್ಸ್‌ನ ರೋಸ್ಟರ್‌ಗೆ ಸೇರಿಸಿದೆ.

Related Articles

Leave a Reply

Your email address will not be published. Required fields are marked *

error: Content is protected !!