4.10 ಕೆಜಿ ತೂಕದ ಗೋಲ್ಡನ್ ಶರ್ಟ್, 1,78,00,000 ಕೋಟಿ ರೂ. ಮೌಲ್ಯ
ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರು 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ವಿಶ್ವದ ಅತ್ಯಂತ ದುಬಾರಿ ಶರ್ಟ್ ಹೊಂದಿರುವ ವ್ಯಕ್ತಿ. ಇವರ ಈ ದುಬಾರಿ ಶರ್ಟ್ನಿಂದಲೇ 2016 ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದರು. 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ 1,78,00,000 ಕೋಟಿ ರೂ. ಮೌಲ್ಯದ್ದಾಗಿದೆ ಮತ್ತು ಪರಾಖ್ ಅವರ ಶ್ರೀಮಂತ ಸಂಗ್ರಹದ ಒಂದು ಭಾಗವಾಗಿದೆ. ಇದರಲ್ಲಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳು ಸೇರಿವೆ.
2014 ರಲ್ಲಿ ಪಂಕಜ್ ಪರಾಖ್ ಅವರ 45 ನೇ ಹುಟ್ಟುಹಬ್ಬಕ್ಕೆ ಈ ದುಬಾರಿ ಶರ್ಟ್ ಅನ್ನು ನಾಸಿಕ್‌ನ ಬಫ್ನಾ ಜ್ಯುವೆಲ್ಲರ್ಸ್‌ನಿಂದ ವಿನ್ಯಾಸಗೊಳಿಸಲಾಗಿತ್ತು. 20 ಆಯ್ದ ಕುಶಲಕರ್ಮಿಗಳ ತಂಡವು ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಶ್ರಮ ವಹಿಸಿ ಈ ಶರ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ. 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ಈ ಶರ್ಟನ್ನು ಒಳಭಾಗದಿಂದ ಆರಾಮದಾಯಕ ಮತ್ತು ದೇಹಕ್ಕೆ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಒಳಭಾಗದಲ್ಲಿ ಬಟ್ಟೆಯನ್ನು ಹೊಂದಿದ್ದು, ಹೊರಭಾಗದಲ್ಲಿ ಚಿನ್ನದಿಂದ ವಿನ್ಯಾಸಗೊಳಿಸಲಾಗಿದೆ. ಇದರ ಹೊರತಾಗಿ ಈ ಶರ್ಟ್ ಅನ್ನು ವಾಶ್ ಮಾಡಬಹುದಾಗಿದೆ.
ಮುಂಬೈನಿಂದ ಸುಮಾರು 260 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಉಪ ಮೇಯರ್ ಆಗಿ ಗುರುತಿಸಿಕೊಂಡಿರುವ ಪಂಕಜ್ ಪರಾಖ್. ದುಬಾರಿ ಶರ್ಟ್ನಿಂದಲೇ’ದಿ ಮ್ಯಾನ್ ವಿತ್ ದಿ ಗೋಲ್ಡನ್ ಶರ್ಟ್’ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ.