main logo

ಚಿನ್ನದ ಗಣಿ ಕುಸಿದು ಕನಿಷ್ಠ 30 ಮಂದಿ ಸಾವು: ಇಲ್ಲಿದೆ ಭಯಾನಕ ದೃಶ್ಯ

ಚಿನ್ನದ ಗಣಿ ಕುಸಿದು ಕನಿಷ್ಠ 30 ಮಂದಿ ಸಾವು: ಇಲ್ಲಿದೆ ಭಯಾನಕ ದೃಶ್ಯ

ವೆನೆಜುವೆಲಾದಲ್ಲಿ ತೆರೆದ ಚಿನ್ನದ ಗಣಿ ಕುಸಿದು ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ. ಬೊಲಿವರ್ ರಾಜ್ಯದಲ್ಲಿ (Bolivar Venezuela) ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣಿನ ಗೋಡೆ ಕುಸಿದು 23 ಮೃತದೇಹಗಳನ್ನು ರಕ್ಷಕರು ಹೊರತೆಗೆದಿದ್ದಾರೆ. ಕೇಂದ್ರ ವೆನೆಜುವೆಲಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಿದ್ದಾಗ ಅಕ್ರಮವಾಗಿ ನಿರ್ವಹಿಸುತ್ತಿದ್ದ ಚಿನ್ನದ ಗಣಿಯಲ್ಲಿ ಮಣ್ಣಿನ ಗೋಡೆ ಕುಸಿದಿದೆ (illegally operated open pit gold mine collapse). ಬೊಲಿವರ್ ರಾಜ್ಯದ ಕಾಡಿನಲ್ಲಿರುವ ಬುಲ್ಲಾ ಲೋಕಾ ಎಂದು ಕರೆಯಲ್ಪಡುವ ತೆರೆದ ಗಣಿಯಿಂದ ಸುಮಾರು 23 ಶವಗಳನ್ನು ಮಣಿನಡಿಯಿಂದ ಹೊರತೆಗೆಯಲಾಗಿದೆ ಎಂದು ಸ್ಥಳೀಯ ಅಧಿಕಾರಿ ಯೋರ್ಗಿ ಆರ್ಸಿನಿಗಾ ಬುಧವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಬೊಲಿವರ್ ಪ್ರದೇಶವು ಚಿನ್ನ, ವಜ್ರಗಳು, ಕಬ್ಬಿಣ, ಬಾಕ್ಸೈಟ್, ಸ್ಫಟಿಕ ಶಿಲೆ ಮತ್ತು ಕೋಲ್ಟಾನ್ಗಳಿಂದ ಸಮೃದ್ಧವಾಗಿದೆ. ರಾಜ್ಯದ ಗಣಿಗಳ ಹೊರತಾಗಿ, ಅಕ್ರಮವಾಗಿ ನೈಸರ್ಗಿಕ ಸಂಪನ್ಮೂಲ ಹೊರತೆಗೆಯುವ ಉದ್ಯಮವೂ ಸಹ ನಡೆಯುತ್ತಿದೆ.
ಭಾರಿ ಪ್ರಮಾಣದ ಈ ದುರಂತದ ಬಗ್ಗೆ ನಾಗರಿಕ ರಕ್ಷಣೆಯ ಉಪ ಮಂತ್ರಿ ಕಾರ್ಲೋಸ್ ಪೆರೆಜ್ ಆಂಪ್ಯೂಡಾ ಅವರು X ಟ್ವಿಟ್ಟರ್​ ಖಾತೆಯಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತೆರೆದ ಗಣಿಯಲ್ಲಿ ನೀರಿಲ್ಲದ ಬೃಹತ್​ ಹೊಂಡದಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ನೆಲದ ಗೋಡೆಯು ನಿಧಾನವಾಗಿ ಕುಸಿಯುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಇದ ಕಂಡು ಕೆಲವರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರೆ, ಅನೇಕ ಮಂದಿ ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಅಧಿಕಾರಿಗಳ ಪ್ರಕಾರ, ಹತ್ತಿರದ ಪಟ್ಟಣವಾದ ಲಾ ಪರಾಗ್ವಾದಿಂದ ಏಳು ಗಂಟೆಗಳ ದೋಣಿ ವಿಹಾರ ದೂರದ ಗಣಿಯಲ್ಲಿ ಸುಮಾರು 200 ಜನರು ಕೆಲಸ ಮಾಡುತ್ತಿದ್ದರು ಎಂದು ಭಾವಿಸಲಾಗಿದೆ. ರಾಜಧಾನಿ ಕ್ಯಾರಕಾಸ್‌ನ ಆಗ್ನೇಯಕ್ಕೆ 750 ಕಿಲೋಮೀಟರ್ (460 ಮೈಲುಗಳು) ದೂರದಲ್ಲಿರುವ ಲಾ ಪರಾಗ್ವಾದಿಂದ ನಾಲ್ಕು ಗಂಟೆಗಳ ಪ್ರಾದೇಶಿಕ ರಾಜಧಾನಿ ಸಿಯುಡಾಡ್ ಬೊಲಿವರ್‌ನಲ್ಲಿರುವ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲಾಗುತ್ತಿದೆ ಎಂದು ಬೊಲಿವರ್ ರಾಜ್ಯದ ನಾಗರಿಕ ಭದ್ರತೆಯ ಕಾರ್ಯದರ್ಶಿ ಎಡ್ಗರ್ ಕೊಲಿನಾ ರೆಯೆಸ್ ಹೇಳಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಮಿಲಿಟರಿ, ಅಗ್ನಿಶಾಮಕ ದಳಗಳು ಮತ್ತು ಇತರ ಸಂಸ್ಥೆಗಳು ವಾಯು ಪ್ರದೇಶದ ಮೂಲಕ ಸ್ಥಳಕ್ಕೆ ತಲುಪಿವೆ. ಬದುಕುಳಿದವರ ಹುಡುಕಾಟದಲ್ಲಿ ಸಹಾಯ ಮಾಡಲು ರಕ್ಷಣಾ ತಂಡಗಳನ್ನು ಕ್ಯಾರಕಾಸ್‌ನಿಂದ ವಾಯುಮಾರ್ಗದಲ್ಲಿ ಕರೆದೊಯ್ಯಲಾಗುತ್ತಿದೆ ಎಂದು ಅವರು ಹೇಳಿದರು.

ಇಂತಹ ದುರಂತ ಸಂಭವಿಸುತ್ತದೆ ಎಂದು ಎಣಿಸಿದ್ದೆವು. ಇಲ್ಲಿನ ಅಸುರಕ್ಷಿತ ಕೆಲಸದ ಪರಿಸ್ಥಿತಿಗಳ ಬಗ್ಗೆ ಮೊದಲಿಂದಲೂ ಆತಂಕವಿತ್ತು. ಅವರಲ್ಲಿ ಹೆಚ್ಚಿನವರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ. ಈ ಗಣಿ ಬಹಳಷ್ಟು ಚಿನ್ನವನ್ನು ನೀಡಿದೆ. ಆದರೆ ಈಗ ನೋಡಿದರೆ ಹೀಗಾಗಿದೆ ಎಂದು ಸ್ಥಳೀಯ ನಿವಾಸಿ ರಾಬಿನ್ಸನ್ ಬಸಂತ ಗಣಿಗಾರರ AFP ಗೆ ತಿಳಿಸಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಇದೇ ಪ್ರದೇಶದಲ್ಲಿ ಗಣಿ ಕುಸಿದು ಕನಿಷ್ಠ 12 ಜನರು ಸಾವನ್ನಪ್ಪಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!