Site icon newsroomkannada.com

ಭಾರತದ ಈ ನಗರದಲ್ಲಿ ಗೋಬಿ ಮಂಚೂರಿ ಮಾರಾಟವೇ ನಿಷೇಧ 

ಈ ಕ್ರಮಕ್ಕೆ ಕಾರಣ ಏನು ಗೊತ್ತಾ
ಗೋಬಿ ಮಂಚೂರಿಯನ್ ತಿನಿಸು ಬಹುತೇಕರಿಗೆ ಇಷ್ಟ. ಹೀಗಾಗಿ ಭಾರತದ ಯಾವುದೇ ನಗರ, ಪಟ್ಟಣಕ್ಕೆ ತೆರಳಿದರೂ ಗೋಬಿ ಮಂಚೂರಿಯನ್ ಬಾರಿ ಬೇಡಿಕೆ ಇದೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಅಷ್ಟಕ್ಕೂ ಮುನ್ಸಿಪಲ್ ಕಾರ್ಪೋರೇಶನ್ ಗೋಬಿ ಮಂಚೂರಿಯನ್ ನಿಷೇಧಿಸಲು ಕಾರಣವೇನು? ಮಕ್ಕಳಿಂದ ಹಿಡಿದು ಎಲ್ಲರಿಗೂ ಗೋಬಿ ಮಂಚೂರಿಯನ್ ನೆಚ್ಚಿನ ತಿನಿಸು. ಗೋಬಿಯಲ್ಲೂ ಹಲವು ವಿಧಗಳಿವೆ. ಭಾರತದ ಬಹುತೇಕ ಎಲ್ಲಾ ಕಡೆ ಗೋಬಿ ಲಭ್ಯವಿದೆ. ಹಲವರು ಸಂಜೆ ಹೊತ್ತು ಗೋಬಿ ತಿನ್ನದೆ ಮುಂದಕ್ಕೆ ಸಾಗದ ದಿನಗಳಿರುವುದಿಲ್ಲ ಬಹುತೇಕ ನೆಚ್ಚಿನ ಆಹಾರ ಗೋಬಿ ಮಂಚೂರಿಯನ್‌ ನಿಷೇಧ ಹೇರಲಾಗಿದೆ. ಹೌದು, ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಗೋವಾದ ಮಪುಸಾ ಮುನ್ಸಿಪಲ್ ವ್ಯಾಪ್ತಿಯಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ
ನಗರದ ಆಡಳಿತ ವಿಭಾಗವೇ ಈ ಆದೇಶ ಹೊರಡಿಸಿದೆ.ಇದರ ಹಿಂದೆ ಮುಖ್ಯ ಕಾರಣವಿದೆ. ಗೋವಾದ ಮಪುಸಾ ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ನಗರ. ಕಳೆದ ಹಲವು ವರ್ಷಗಳಿಂದ ಮಪುಸಾ ಆಹಾರ ಇಲಾಖೆ ಫಾಸ್ಟ್ ಫುಡ್ ಸೆಂಟರ್, ಸ್ಟಾಲ್‌ಗಳಿಗೆ ನೋಟಿಸ್ ನೀಡುತ್ತಲೇ ಬಂದು, ಇದೀಗ ಗೋಬಿ ಮಂಚೂರಿಯನ್ ನಿಷೇಧಿಸಿದೆ. ಗೋಬಿಗೆ ಬಳಸುತ್ತಿರುವ ರಾಸಾಯನಿಕ, ಬಣ್ಣ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ದಾಖಲಾಗಿತ್ತು. ಈ ಕುರಿತು ಆಹಾರ ಇಲಾಖೆ ದಾಳಿಗಳನ್ನು ನಡೆಸಿ ನೋಟಿಸ್ ನೀಡಿತ್ತು. ಆದರೆ ಈ ನೋಟಿಸ್‌ಗೆ ಸೊಪ್ಪು ಹಾಕಿರಲಿಲ್ಲ. ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಸಭೆ ನಡೆಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಯಾವುದೇ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಎಂದು ಆದೇಶ ನೀಡಲಾಗಿದೆ.

 

Exit mobile version