main logo

ಗೋವಾದಲ್ಲಿ ಭಾರಿ ವಿವಾದ ಹುಟ್ಟುಹಾಕಿದ ಸನ್​ ಬರ್ನ್​ ಫೆಸ್ಟಿವಲ್: ನೃತ್ಯ, ಸಂಗೀತದ ಮಧ್ಯೆ ಅಲ್ಲಿ ಆಗಿದ್ದೇನು

ಗೋವಾದಲ್ಲಿ ಭಾರಿ ವಿವಾದ ಹುಟ್ಟುಹಾಕಿದ ಸನ್​ ಬರ್ನ್​ ಫೆಸ್ಟಿವಲ್: ನೃತ್ಯ, ಸಂಗೀತದ ಮಧ್ಯೆ ಅಲ್ಲಿ ಆಗಿದ್ದೇನು

ಗೋವಾ: ಒಂದೆಡೆ ಮದ್ಯ ಇನ್ನೊಂದೆಡೆ ಕರ್ಕಶವಾದ ಸಂಗೀತ ಅದರ ಮಧ್ಯೆ ಎಲ್​ಇಡಿ ಪರದೆ ಮೇಲೆ ಈಶ್ವರನ ಚಿತ್ರವಿಟ್ಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಇದೀಗ ವಿವಾದ ಭುಗಿಲೆದ್ದಿದೆ. ಡಿಸೆಂಬರ್ 28 ರಿಂದ ಗೋವಾದಲ್ಲಿ ಆರಂಭವಾದ ಸನ್​ ಬರ್ನ್​ ಫೆಸ್ಟಿವಲ್​ ಇಂದು ಕೊನೆಗೊಳ್ಳುತ್ತಿದೆ.

ಆಮ್ ಆದ್ಮಿ ಪಕ್ಷದ ಗೋವಾ ಅಧ್ಯಕ್ಷ ಅಮಿತ್ ಪಾಲೇಕರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ಸನ್​ ಬರ್ನ್​ ಫೆಸ್ಟಿವಲ್​ನಲ್ಲಿ ನೃತ್ಯ, ಸಂಗೀತ, ಮದ್ಯದ ಮಧ್ಯೆ ಶಿವನ ಚಿತ್ರವನ್ನು ಇರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸನಾತನ ಧರ್ಮಕ್ಕೆ ಧಕ್ಕೆಯಾದಂತಾಗಿದೆ ಎಂದಿದ್ದಾರೆ.

ಸನಾತನ ಧರ್ಮದ ಸಮಗ್ರತೆಗೆ ಧಕ್ಕೆ ಉಂಟಾಗಿರುವುದರಿಂದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಎಪಿ ನಾಯಕ ಒತ್ತಾಯಿಸಿದ್ದಾರೆ. ಸನ್ ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಶುಕ್ರವಾರ ರಾತ್ರಿ ಸನ್‌ಬರ್ನ್ ಆಯೋಜಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ ಮಾಪುಸಾದಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಭಿಕೆ ದೂರಿನಲ್ಲಿ ತಿಳಿಸಿದ್ದಾರೆ. 25 ಲಕ್ಷ ಮೌಲ್ಯದ ಮೊಬೈಲ್​ ಫೋನ್​ಗಳ ಕಳ್ಳತನವಾಗಿದೆ. ನಿವಾರದಂದು ಗೋವಾ ಪೊಲೀಸರು ಗ್ಯಾಂಗ್‌ನ ಏಳು ಸದಸ್ಯರನ್ನು ಬಂಧಿಸಿದ್ದಾರೆ, ಇವರೆಲ್ಲರೂ ಕದಿಯುವ ದೃಷ್ಟಿಯಿಂದಲೇ ಮುಂಬೈನಿಂದ ಬಂದಿದ್ದರು ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!