main logo

ನನ್ನ ತಂಗಿಗೆ ಬ್ರೇಕಪ್ ಆಗಿದೆ ಆಕೆಯೊಂದಿಗೆ ಸಹಕರಿಸುವಂತೆ ಆ ಬೇಡಿಕೆ ಇರಿಸಿದ ಗರ್ಲ್‌ಫ್ರೆಂಡ್‌, ಮುಂದೇನಾಯ್ತು

ನನ್ನ ತಂಗಿಗೆ ಬ್ರೇಕಪ್ ಆಗಿದೆ ಆಕೆಯೊಂದಿಗೆ ಸಹಕರಿಸುವಂತೆ  ಆ ಬೇಡಿಕೆ ಇರಿಸಿದ ಗರ್ಲ್‌ಫ್ರೆಂಡ್‌, ಮುಂದೇನಾಯ್ತು

ರೆಡ್ಡಿಟ್ ನಲ್ಲಿ ಆತ ಬರೆದುಉಕೊಂಡಿದ್ದೇನು?
ನ್ಯೂಯಾರ್ಕ್: ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಕೆಲವು ಗುಪ್ತ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿರುವ ರೆಡ್ಡಿಟ್‌ನಲ್ಲಿ 23 ವರ್ಷದ ಅಮೇರಿಕಾದ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್‌ ಸ್ವತಃ ಆಕೆಯ ತಂಗಿಯೊಂದಿಗೆ ಮಲಗಬೇಕು ಎಂದು ಹೇಳಿದ ಬಗ್ಗೆ ತಲ್ಲಣಗೊಂಡು ಈ ವಿಚಾರವನ್ನು ಹಂಚಿಕೊಂಡು ಸಾರ್ವಜನಿಕರ ಸಲಹೆ ಕೇಳಿದ್ದಾನೆ.
23 ವರ್ಷದ ಹೆಸರೇಳಲಿಚ್ಛಿಸದ ಯುವಕ ತಾನು 2 ವರ್ಷದಿಂದ ಗರ್ಲ್ ಫ್ರೆಂಡ್ ಜತೆ ಡೇಟಿಂಗ್ ಮಾಡುತ್ತಿದ್ದೇನೆ. ಸುಂದರ ಸುಗುಣೆಯಾಗಿರುವ ಆಕೆ, ಹತಾಶೆಯಲ್ಲಿರುವವರಿಗೆ ಸಹಾಯ ಮಾಡುವ ಪ್ರವೃತ್ತಿ ಹೊಂದಿದ್ದಾಳೆ. ನಮ್ಮಿಬ್ಬರ ನಡುವ ಶ್ರೇಷ್ಠ ಸಂಬಂಧವಿದ್ದು, ಅದಕ್ಕೆ ಕೊಡಲಿ ಪೆಟ್ಟು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ನನ್ನ ಗರ್ಲ್‌ಫ್ರೆಂಡ್‌ನ ಸಹೋದರಿಗೆ ಬ್ರೇಕಪ್ ಆಗಿದ್ದು, ಆಕೆ ತುಂಬಾ ಹತಾಶೆಗೊಂಡಿದ್ದಾಳೆ. ನೀನು ಆಕೆಯ ಹತಾಶೆ ಮನೋಭಾವ ಹಾಗೂ ನೋವಿನಿಂದ ಹೊರತಂದು ಸ್ಪೂರ್ತಿಯನ್ನು ತುಂಬಲು ಸಹಾಯ ಮಾಡುವಂತೆ ಕೇಳಿದ್ದಾಳೆ. ಆಗ, ನೀನು ನನ್ನ ಅವಳಿ ಸಹೋದರಿಯೊಂದಿಗೆ ಮಲಗಿ ಸೆಕ್ಸ್ ಮಾಡಬೇಕು. ಆಗ ಖಿನ್ನತೆಯಿಂದ ಹೊರಗೆ ಬರುತ್ತಾಳೆ. ಈ ಬಗ್ಗೆ ನನ್ನ ಸಹೋದರಿ ಕೂಡ ನಿಮ್ಮನ್ನು ಇಷ್ಟಪಟ್ಟಿದ್ದು, ನಿನ್ನೊಂದಿಗೆ ಮಲಗಲು ಸಿದ್ಧವಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಇದರಿಂದ ಇರಿಸು ಮುರಿಸು ಉಂಟಾಗಿ ನಾನು ಯಾವುದೇ ಉತ್ತರ ಕೊಡದೇ ಸಮಯ ಕೇಳಿದ್ದೇನೆ. ನಾನು 2 ವರ್ಷದಿಂದ ಗರ್ಲ್ ಫ್ರೆಂಡ್ ಜೊತೆಗಿದ್ದೇನೆ. ತುಂಬಾ ದಯೆಯುಳ್ಳ ಸ್ವಭಾವದ ಆಕೆ ಯಾರೇ ಸೋತಾಗಲೂ ಚಿಯರ್ ಮಾಡುವಂತಹ ವ್ಯಕ್ತಿತ್ವ ಹೊಂದಿದ್ದಾಳೆ. ಈಗ ಸ್ವತಃ ತಂಗಿಯೇ ಖಿನ್ನತೆಗೆ ಒಳಗಾಗಿದ್ದರಿಂದ ತನ್ನ ಬಾಯ್‌ಫ್ರೆಂಡ್‌ ಹಂಚಿಕೊಳ್ಳಲು ಮುಂದಾಗಿದ್ದಾಳೆ. ತನ್ನ ತಂಗಿಯೊಂದಿಗೆ ನೀವು ಸೆಕ್ಸ್ ಮಾಡಬೇಕು. ಆಗ ತಾನು ಇಬ್ಬರಿಗೂ ತೊಂದರೆ ಕಡದೇ ದೂರವಿರುತ್ತೇನೆ ಎಂದು ಹೇಳಿದ್ದಾಳೆ. ಕಳೆದ ಎರಡು ವರ್ಷಗಳಿಂದ ಶ್ರೇಷ್ಠ ಸಂಬಂಧವನ್ನು ಕಾಪಾಡಿಕೊಂಡು ಬಂದ ನನಗೆ ಶಾಕ್ ಆಗಿದ್ದು, ಈ ಬಗ್ಗೆ ನಿಮ್ಮ ಸಲಹೆಗಳೇನು ಎಂದು ರೆಡ್ಡಿಟ್ ಬಳಕೆದಾರರಿಗೆ ಕೇಳಿದ್ದಾರೆ.

ತನ್ನ ಗೆಳತಿ ಈ ವಿಚಾರವನ್ನು ಹೇಳಿದಾಗ ಯೋಚಿಸಲು ಸಮಯ ಕೇಳಿದೆ. ಇಡೀ ದಿನ ರಾತ್ರಿ ನಿದ್ದೆಯೇ ಬರಲಿಲ್ಲ. ಒಂದು ವೇಳೆ ಗೆಳತಿ ಹೇಳಿದಂತೆ ಆಕೆಯ ಸಹೋದರಿ ಜತೆ ಸೆಕ್ಸ್ ಮಾಡಿದರೆ, ಮೂವರ ನಡುವಿನ ಸಂಬಂಧ ಹಾಳಾಗಲಿದೆ ಎಂಬ ಭಯವಾಗಿದೆ. ನಂತರ, ನನ್ನ ಗರ್ಲ್‌ ಫ್ರೆಂಡ್ ಸಹೋದರಿಯೇ ನಮ್ಮ ಸಂಬಂಧವನ್ನು ಹಾಳು ಮಾಡಬಹುದು. ನನ್ನ ಗೆಳತಿಯೊಂದಿಗೆ ನಾನು ಹೊಂದಿರುವ ಶ್ರೇಷ್ಠ ಸಂಬಂಧ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.

ಈ ಯುವಕನ ತೊಳಲಾಟಕ್ಕೆ ಕೆಲವು ರೆಡ್ಡಿಟ್ ಬಳಕೆದಾರರು ಕೂಡ ಸಲಹೆ ನೀಡಿದ್ದು, ನೀವು ನಿಮ್ಮ ಗರ್ಲ್‌ಫ್ರೆಂಡ್‌ನ ಅವಳಿ ಸಹೋದರಿಯೊಂದಿಗೆ ತೊಡಗಿಸಿಕೊಳ್ಳುವುದು ಕೆಟ್ಟ ಆಲೋಚನೆಯಾಗಿದೆ ಎಂದಿದ್ದಾರೆ. ನೀವು ಒಪ್ಪಿಕೊಳ್ಳಬೇಡಿ. ನಿಮ್ಮ ಸಂಬಂಧವನ್ನು ಹಾಳು ಮಾಡುವುದಲ್ಲದೇ ಆಕೆಯ ಸಹೋದರಿ ಜತೆಗೆ ಸಂಬಂಧವನ್ನು ಕೂಡ ಮುಂದಿನ ದಿನಗಳಲ್ಲಿ ಬದಲಾಯಿಸಬಹುದು. ಗರ್ಲ್‌ಫ್ರೆಂಡ್‌ ತಂಗಿಯ ಜೊತೆಗೆ ಸೆಕ್ಸ್ ಮಾಡುವ ಬಗ್ಗೆ ಸ್ವಲ್ಪವೂ ಯೋಚಿಸಬೇಡಿ. ನಿಮ್ಮ ಗೆಳತಿಯ ಸ್ವಾಭಿಮಾನ ನಿಮ್ಮ ಹೊಣೆ, ಆದರೆ ಆಕೆಯ ಸಹೋದರಿಯ ಸ್ವಾಭಿಮಾನವನ್ನು ಸರಿಪಡಿಸುವುದು ನಿಮ್ಮ ಕೆಲಸವಲ್ಲ ಎಂದು ಸಲಹೆ ನೀಡಿದ್ದಾರೆ.

ಇನ್ನು ಸಾವಿರಾರು ಕಮೆಂಟ್‌ಗಳು ಬಂದ ನಂತರ, ಪುನಃ ಮತ್ತೊಂದು ಪೋಸ್ಟ್ ಮಾಡಿದ ಯುವಕ ನಾನು ಈ ವಿಚಾರವಾಗಿ ನನ್ನ ಗರ್ಲ್‌ ಫ್ರೆಂಡ್ ಭೇಟಿ ಮಾಡಿ, ನಿನ್ನ ತಂಗಿಯೊಂದಿಗೆ ಸೆಕ್ಸ್ ಮಾಡುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಸ್ವತಃ ಆಕೆಯೇ ಪಶ್ಚತಾಪ ಪಡುತ್ತಿದ್ದು, ಯಾರೊಂದಿಗೂ ನನ್ನನ್ನು ಹಂಚಿಕೊಳ್ಳದಿರಲು ತೀರ್ಮಾನಿಸಿದ್ದಾಳೆ. ಇಂತಹ ಆಲೋಚನೆ ಮಾಡಿ ಮಾತನಾಡಿದ್ದಕ್ಕೆ ಕ್ಷಮೆಯನ್ನೂ ಕೇಳಿದ್ದು, ನಾವಿಬ್ಬರೂ ಸ್ಹಜ ಸ್ಥಿತಿಗೆ ಮರಳಿದ್ದೇವೆ. ಎಂದಿಗಿಂತಲೂ ನಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗಿದೆ. ಆಕೆಯ ಸಹೋದರಿಗೆ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡು ಖಿನ್ನತೆಯಿಂದ ಹೊರಗೆ ಬರಲು ಸಲಹೆ ನೀಡವುದಾಗಿ ತೀರ್ಮಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!