Site icon newsroomkannada.com

ಮದುವೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತ ಯುವತಿ: ಆಕೆಯ ಮಮ್ಮಿ ಪೊಲೀಸ್ ಠಾಣೆ ಮೆಟ್ಟಲೇರಿದ್ದೇಕೆ ಗೊತ್ತಾ

ಮದುವೆ ನಿಗದಿಯಾಗಿದ್ದ ಯುವಕನೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಪರಿಣಾಮ ಮತ್ತೆ ಗರ್ಭಿಣಿಯಾದ ಯುವತಿ
ಮಹಾರಾಷ್ಟ್ರ: 17 ವರ್ಷದ ಯುವತಿಯೊಬ್ಬಳು(Viral News) ಮದುವೆಗೂ ಮುನ್ನ ಎರಡು ಬಾರಿ ಗರ್ಭಿಣಿ(Pregnant) ಯಾಗಿ, ಹೆತ್ತ ಮಗುವನ್ನು ಮರಾಟ ಮಾಡಿರುವ ಘಟನೆ ಮಹಾರಾಷ್ಟ್ರ(Maharashtra)ದ ಪಾಲ್ಗಾರ್‌ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಯನ್ನು ನಂಬಿಸಿ ಅನ್ಯಧರ್ಮೀಯ ಯುವಕ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದ. ಈ ವಿಚಾರ ತಿಳಿದ ಆಕೆಯ ಪೋಷಕರು ಆಗಷ್ಟೇ ಜನಿಸಿದ ಮಗುವನ್ನು ಮಾರಾಟ ಮಾಡಿದ್ದು, ಯುವತಿ ದೂರಿನ ಮೇಲೆ ಒಟ್ಟು 16 ಜನರ ವಿರುದ್ಧ ಎಫ್‌ಐಆರ್‌(FIR) ದಾಖಲಿಸಲಾಗಿದೆ.

2021ರಲ್ಲಿ 23ವರ್ಷದ ಅನ್ಯಧರ್ಮೀಯ ಯುವಕನೋರ್ವನನ್ನು ನಂಬಿ ಯುವತಿ ಆತನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ಆಕೆಗೆ 3 ತಿಂಗಳಾಗುತ್ತಿದಂತೆ ಆಕೆ ಪೋಷಕರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಆಕೆಯ ಪೋಷಕರು ಕಾಲೇಜು ಪ್ರಾಂಶುಪಾಲ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬಳ ಸಹಾಯದಿಂದ ಬಾಲಕಿಯನ್ನು ಮುಂಬೈನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಗೆ ಹೆರಿಗೆ ಮಾಡಿಸಿದ್ದರು. ಅಲ್ಲಿ ವಕೀಲರು ಕೆಲವೊಂದು ದಾಖಲೆ ಪತ್ರಗಳಿಗೆ ಯುವತಿ ಕೈಯಿಂದ ಸಹಿ ಮಾಡಿಸಿಕೊಂಡಿದ್ದಾರೆ. 2021ರ ಸೆ.24ರಂದು ಬಾಲಕಿಗೆ ಹೆರಿಗೆ ಆಗಿದ್ದು, ಆ ಮಗುವನ್ನು ಪೋಷಕರು ಸಾಮಾಜಿಕ ಕಾರ್ಯಕರ್ತೆಗೆ ಒಪ್ಪಿಸಿದ್ದರು. ಅಲ್ಲಿಂದ ಆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇದಾದ ಏಳು ತಿಂಗಳ ಬಳಿಕ ಯುವತಿ ಆ ಯುವಕನನ್ನು ಸಂಪರ್ಕಿಸಿದಾದ ಆತ ಸಾಮಾಜಿಕ ಕಾರ್ಯಕರ್ತೆಗೆ 4.5ಲಕ್ಷ ರೂ. ನೀಡಿರುವ ವಿಚಾರ ತಿಳಿದಿತ್ತು. ಯುವತಿಯ ಪೋಷಕರು ಮತ್ತು ಆಕೆಯ ಮಾವ ತಲಾ 1.5 ಲಕ್ಷ ರೂ. ಪಡೆದಿದ್ದರು. ಈ ವಿಚಾರ ತಿಳಿದು ಯುವತಿ ವಿರೋಧ ವ್ಯಕ್ತಪಡಿಸಿದಾಗ ಆಕೆಯನ್ನು ಬಲವಂತವಾಗಿ ಅಜ್ಜಿ ಮನೆಗೆ ಕಳುಹಿಸಿ ಅಲ್ಲಿ ಬೇರೆ ಯುವಕನ ಜೊತೆ ಆಕೆಯ ಮದುವೆ ತಯಾರಿ ನಡೆಸಲಾಗಿತ್ತು. ಮದುವೆ ನಿಗದಿಯಾಗಿದ್ದ ಯುವಕನೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಮತ್ತೊಮ್ಮೆ ಗರ್ಭಿಣಿ ಆದಳು. ಅದೇ ಸಂದರ್ಭದಲ್ಲಿ ಈ ಹಿಂದೆಯೂ ಆಕೆ ಗರ್ಭಿಣಿಯಾಗಿದ್ದ ವಿಚಾರ ಆ ವ್ಯಕ್ತಿಗೆ ತಿಳಿದು ಆತ ಮದುವೆಗೆ ನಿರಾಕರಿಸಿದ್ದ ಎನ್ನಲಾಗಿದೆ.

ಕೊನೆಗೆ ದಿಕ್ಕೆಟ್ಟಿದ್ದ ಯುವತಿ ಪೋಷಕರ ಮನೆಗೆ ಮರಳಿದ್ದಳು. ಅಲ್ಲಿ ಆಕೆ ಎರಡನೇ ಬಾರಿ ಮಗುವಿಗೆ ಜನ್ಮ ನೀಡಿದ್ದಳು. ಈ ಬಾರಿ ಆಕೆಯ ಮಗುವನ್ನು ಮಾರಾಟ ಮಾಡಲು ಪೋಷಕರು ಒತ್ತಾಯಿಸಿದ್ದರು. ಅಲ್ಲದೇ ಮಾರಾಟಕ್ಕೆ ಎಲ್ಲಾ ಸಿದ್ದತೆ ನಡೆಸಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಯುವತಿಯನ್ನು ವಿಚಾರಣೆ ನಡೆಸಿದಾಗ ಎಲ್ಲಾ ವಿಚಾರಗಳನ್ನು ಆಕೆ ಬಾಯ್ಬಿಟ್ಟಿದ್ದಾಳೆ. ಇದೀಗ ಘಟನೆ ಸಂಬಂಧ ಯುವತಿಯ ಪೋಷಕರು, ಪ್ರಾಂಶುಪಾಲ, ಇಬ್ಬರು ವೈದ್ಯೆಯರು, ಸಾಮಾಜಿಕ ಕಾರ್ಯಕರ್ತೆ ಸೇರಿದಂತೆ ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Exit mobile version