ಉಳ್ಳಾಲ: ಗಟ್ಟಿ ಸಮಾಜದ ಬಗೆ ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗಟ್ಟಿ ಸಮಾಜದ ವಿಪರೀತ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತ ಗಟ್ಟಿ ಸಮಾಜದ ಆಗ್ರಹಕ್ಕೆ ಮಣಿದ ಸದಾಶಿವ ಉಳ್ಳಾಲ್ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ್ದಾರೆ ಆದರೆ ಅದು ಆಗೋದಿಲ್ಲ ಹೇಗೆ ಸುದ್ದಿಗೋಷ್ಠಿಯಲ್ಲಿ ಗಟ್ಟಿ ಸಮಾಜಕ್ಕೆ ಅವಮಾನಿಸಿದ್ದೀರೋ ಹಾಗೇ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೇಳಬೇಕು ಎಂದು ಗಟ್ಟಿ ಸಮಾಜ ಬಾಂಧವರು ಪಟ್ಟು ಹಿಡಿದಿದ್ದಾರೆ.ಆದರೆ ಇದುವರೆಗೂ ಸದಾಶಿವ ಉಳ್ಳಾಲ ಇದಕ್ಕೆ ಉತ್ತರ ನೀಡದೆ ಸುಮ್ಮನಿರೋದು ಗಟ್ಟಿ ಸಮಾಜ ಕೋಪವನ್ನು ಹೆಚ್ಚು ಮಾಡಿದೆ. ಇಂದು ತುರ್ತು ಸಭೆ ಕರೆದಿದ್ದ ಗಟ್ಟಿ ಸಮಾಜ ತುರ್ತು ಸಭೆ ತೆಗೆದುಕೊಂಡ ನಿರ್ಧಾರಗಳನ್ನು ಗೌಪ್ಯಾವಾಗಿಟ್ಟಿದೆ ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.