Site icon newsroomkannada.com

ಗ್ಯಾಸ್ ಸಿಲಿಂಡರ್ ದರ ಇಳಿಕೆ: ಎಷ್ಟು ಎಂಬ ವಿವರ ಇಲ್ಲಿದೆ

ದೇಶಾದ್ಯಂತ ಇಂದು (ಜುಲೈ 1) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ (LPG Price) ಪರಿಷ್ಕರಣೆ ಮಾಡಲಾಗಿದೆ. ಇಂಡಿಯನ್ ಆಯಿಲ್‌ನ ವೆಬ್‌ಸೈಟ್ ಪ್ರಕಾರ, ದೇಶೀಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 1103 ರೂಪಾಯಿ ಇದ್ದರೆ, ಅದೇ ವೇಳೇ, ವಾಣಿಜ್ಯ LPG ಸಿಲಿಂಡರ್ ಬೆಲೆಯು 1773 ರೂಪಾಯಿಗೆ ಬದಲಾಗದೆ ಉಳಿದಿದೆ. ಜೂನ್ ತಿಂಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 83 ರೂಪಾಯಿ ಕಡಿಮೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ ತಿಂಗಳಲ್ಲೂ 172 ರೂಪಾಯಿ ಅಗ್ಗವಾಗಿತ್ತು.

ದೇಶೀಯ ಮಾರುಕಟ್ಟೆಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕೊನೆಯದಾಗಿ 2022ರ ಜುಲೈ 6ರಂದು ಹೆಚ್ಚಿಸಲಾಗಿತ್ತು. ಅಂದಿನಿಂದ ಇದುವರೆಗೂ ದೇಶದ ರಾಜಧಾನಿ ದೆಹಲಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1053 ರೂಪಾಯಿ ಆಗಿದ್ದು, ಅದಕ್ಕೂ ಮೊದಲು 1103 ರೂಪಾಯಿ ಇತ್ತು. ಅಂದು 50 ರೂಪಾಯಿ ಹೆಚ್ಚಳವಾಗಿತ್ತು. ಅಂದರೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಒಂದು ವರ್ಷದಿಂದ ಸ್ಥಿರವಾಗಿವೆ ಎಂದು ಹೇಳಬಹುದು.

Photo Credit –  Twitter

Exit mobile version