ಮಂಗಳೂರು: ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಉಪಕುಲಪತಿ ಜಯರಾಜ್ ಅಮೀನ್ ಅವರು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ಧಾರ್ಮಿಕ ವಿಧಿಗಳನ್ನು ಸ್ವತಃ ವಿಸಿಯವರೇ ನೆರವೇರಿಸಿದ್ದಾರೆ.
ಈ ಹಿಂದೆ ಮಂಗಳೂರು ವಿವಿ ಹಾಸ್ಟೆಲ್ ನ ಬದಲಿಗೆ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಮಾಡಲೇಬೇಕೆಂದು ಬಿಜೆಪಿ ಸಂಘ ಪರಿವಾರ ಪಟ್ಟು ಹಿಡಿದಿದ್ದು, ರಾಜ್ಯಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಾದ ಸದ್ಯದ ಮಟ್ಟಿಗೆ ಅಂತ್ಯ ಕಂಡಂತಾಗಿದೆ.
ಉತ್ತರ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಿ, ಗಣೇಶನ ಉತ್ಸವ ಮಾಡಿದ್ದು, ಕಾರ್ಯಕ್ರಮದಲ್ಲಿ ಆರ್ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಶಾಸಕ ಭರತ್ ಶೆಟ್ಟಿ ಅವರು ಪಾಲ್ಗೊಂಡಿದ್ದರು.