Site icon newsroomkannada.com

HI GOOD MORNIG im commissioner:1 ಗಂಟೆಯಲ್ಲಿ ವಾಪಸ್‌ ಕೊಡ್ತೀನಿ ಸ್ವಲ್ಪ ಹಣ ಕಳುಹಿಸಿ ಅಂತ ಪೊಲೀಸ್‌ ಕಮಿಷನರ್‌ ಹೆಸರಿನಲ್ಲಿ ಮೋಸ

ಮಂಗಳೂರು ಪೊಲೀಸ್ ಕಮಿಷನರ್ ವಾಟ್ಸಪ್ ಹೆಸರಲ್ಲಿ ಮೆಸೆಜ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಘಟನೆ ವರದಿಯಾಗಿದೆ.

ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಘಟನೆ ಇಂದು(ಅ.27) ರಂದು ಬೆಳಕಿಗೆ ಬಂದಿದೆ.ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಫೋಟೋ ದುರ್ಬಳಕೆ ಮಾಡಲಾಗಿದ್ದು, ಅನುಪಮ್ ಅಗರ್ವಾಲ್ ಹೆಸರಲ್ಲಿ ಹಲವರಿಗೆ ವಾಟ್ಸಪ್ ಸಂದೇಶ ಕಳುಹಿಸಲಾಗುತ್ತದೆ. : ಸಂದೇಶ ಕಳುಹಿಸುವವರು ಅನುಪಮ್ ಅಗರ್ವಾಲ್ ಎಂಬುದಾಗಿ ಪರಿಚಯಿಸಿಕೊಂಡು ಬಳಿಕ ತಾನು ಆಸ್ಪತ್ರೆಯಲ್ಲಿರೋದಾಗಿ ಹೇಳಿ ಹಣ ಕಳುಹಿಸಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಅದನ್ನು 1 ಗಂಟೆಯೊಳಗೆ ಮರು ಪಾವತಿಸುವುದಾಗಿ ಸುಳ್ಳು ಆಸ್ವಾಸನೆಯು ನೀಡುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಇಳಿಸಿದೆ.
ಯುಪಿಐ ಕೆಲಸ ಮಾಡ್ತಿಲ್ಲ, ಸ್ವಲ್ಪ ಹಣ ಇದ್ದರೆ ಕೊಡಿ, ಒಂದು ಗಂಟೆಯಲ್ಲಿ ವಾಪಾಸ್ ಕೊಡ್ತೀನಿ ಎಂದು ವಾಟ್ಸಾಪ್ ಮೆಸೇಜ್ ಬರುತ್ತದೆ. ಮಂಗಳೂರಿನ ಹಲವರಿಗೆ ಕಮಿಷನರ್ ಹೆಸರಲ್ಲಿ ಸಂದೇಶ ರವಾನೆಯಾಗಿದ್ದು, ಮಂಗಳೂರು ಕಮಿಷನರ್ ಅಧಿಕೃತ ವಾಟ್ಸಪ್ ಖಾತೆಯ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿದ್ದಾರೆ ಎನ್ನಲಾಗಿದೆ.

8319051976 ನಂಬರ್ ನಲ್ಲಿ ಕಮಿಷನರ್ ಫೋಟೋ ಬಳಸಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಲಾಗಿದೆ. ನಕಲಿ ಖಾತೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದು, ಯಾರೂ ಹಣ ನೀಡದಂತೆ ಸಾರ್ವಜನಿಕರಿಗೆ ಕಮಿಷನರ್ ಮನವಿ ಮಾಡಿದ್ದಾರೆ.

Exit mobile version