Site icon newsroomkannada.com

‌ಬೆಳ್ತಂಗಡಿ: ಮಲಗಿದ ಸ್ಥಿತಿಯಲ್ಲೇ ಇರುವ ವ್ಯಕ್ತಿಯನ್ನು ಗುಣಪಡಿಸುವುದಾಗಿ ನಂಬಿಸಿ ಹಣ ಪೀಕಿಸಿ ಪರಾರಿ

ಬೆಳ್ತಂಗಡಿ: ಮುಂಡಾಜೆ ಗ್ರಾಮದಲ್ಲಿ ಅನಾರೋಗ್ಯದಿಂದಾಗಿ ಮಲಗಿದ ಸ್ಥಿತಿಯಲ್ಲೇ ಇರುವ ವ್ಯಕ್ತಿಯನ್ನು ಗುಣಪಡಿಸುವುದಾಗಿ ಹೇಳಿ ನಂಬಿಸಿದ ಇಬ್ಬರು ಅಪರಿಚಿತರು, 30 ಸಾವಿರ ರು. ನಗದು ಪಡೆದುಕೊಂಡು ವಂಚಿಸಿ ಪರಾರಿಯಾದ ಘಟನೆ ನಡೆದಿದೆ.

ಮುಂಡಾಜೆ ಗ್ರಾಮದ ನಿವಾಸಿ ದಯಾನಂದ ವಂಚನೆಗೆ ಒಳಗಾದ ವ್ಯಕ್ತಿ. ದಯಾನಂದ ಅವರ ತಂದೆ ಕಟ್ಟಡದಿಂದ ಬಿದ್ದು ಸೊಂಟದ ಬಲ ಕಳೆದುಕೊಂಡು ಮಲಗಿದಲ್ಲಿಯೇ ಇದ್ದಾರೆ. ಜ.27ರಂದು ಇವರ ಮನೆಗೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಾವು ಆಯುರ್ವೇದ ಪಂಡಿತರಾಗಿದ್ದು ಪಂಚಕರ್ಮ ಆಯುರ್ವೇದ ಔಷಧಿಯಿಂದ ಅವರನ್ನು ಗುಣಪಡಿಸುವುದಾಗಿ ಹೇಳಿದ್ದಾರೆ.

ಇದಾದ ಬಳಿಕ ಚಿಕಿತ್ಸೆಗೆಂದು ಕೆಲವು ವಸ್ತುಗಳನ್ನು ತರಿಸಿಕೊಂಡಿದ್ದಾರೆ. ಬಳಿಕ ಇನ್ನಷ್ಟು ಔಷಧಿಗಳು ತರಬೇಕಂದು 30 ಸಾವಿರ ಹಣ ಪಡೆದುಕೊಂಡು ಮೊಬೈಲ್ ನಂಬರ್ ನೀಡಿ ತೆರಳಿದ್ದಾರೆ. ಅವರು ವಾಪಸ್‌ ಬಾರದಾಗ ಅವರು ನೀಡಿದ ಸಂಖ್ಯೆಯನ್ನು ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅಪರಿಚಿತರಿಂದ ಮೋಸ ಹೋಗಿರುವುದು ಗೊತ್ತಾಗಿ ಇದೀಗ ದಯಾನಂದ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version