main logo

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಪೊಲೀಸ್​ ಅಧಿಕಾರಿ

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸ ಹೋದ ಮಹಿಳಾ ಪೊಲೀಸ್​ ಅಧಿಕಾರಿ

ಶ್ರೇಷ್ಠಾ ಠಾಕೂರ್​ ಉತ್ತರ ಪ್ರದೇಶ(Uttar Pradesh)ದಲ್ಲಿ ಲೇಡಿ ಸಿಂಗಂ ಎಂದೇ ಪ್ರಖ್ಯಾತರಾಗಿರುವ ಡಿಎಸ್​ಪಿ ಆಗಿದ್ದಾರೆ. ಅವರ ಕೆಲಸಗಳು ಜನರಿಗೆ ನಡುಕ ಹುಟ್ಟಿಸುವಂತಿರುತ್ತಿತ್ತು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಎಡವಿದ್ದಾರೆ. ಐಆರ್​ಎಸ್​ ಅಧಿಕಾರಿ ಎಂದು ಮದುವೆಯಾಗಿದ್ದ ಅವರು ಆತ ಓರ್ವ ಫ್ರಾಡ್​ ಎಂಬುದು ಮದುವೆಯ ಬಳಿಕ ಗೊತ್ತಾಗಿತ್ತು.
ಯಾರನ್ನೂ ಕೂಡ ಕಣ್ಣುಮುಚ್ಚಿ ನಂಬುವಂತಿಲ್ಲ, ಜೀವನದಲ್ಲಿ ಎಂಥಾ ನಿರ್ಧಾರ ತೆಗೆದುಕೊಳ್ಳಬೇಕಿದ್ದರೂ ಹತ್ತು ಬಾರಿ ಆಲೋಚನೆ ಮಾಡುವುದರ ಜತೆಗೆ ಮದುವೆಯಂತಹ ಸಂದರ್ಭದಲ್ಲಿ ಹಿನ್ನೆಲೆಯನ್ನು ಪರಿಶೀಲನೆ ಮಾಡುವುದು ಅಷ್ಟೇ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸುಳ್ಳು ಹೇಳಿಕೊಂಡು ಮದುವೆಯಾಗಿ ಆಭರಣ, ಹಣವನ್ನೆಲ್ಲಾ ದೋಚಿ ಪರಾರಿಯಾಗುವ ಎಷ್ಟೇ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.

2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶ್ರೇಷ್ಠಾ ಠಾಕೂರ್ ಅವರು 2018 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ರೋಹಿತ್ ರಾಜ್ ಎಂಬ ವ್ಯಕ್ತಿಯನ್ನು ವಿವಾಹವಾದರು. ಶ್ರೇಷ್ಠಾ ಅವರಿಗೆ ರೋಹಿತ್ ರಾಜ್ ರಾಂಚಿಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಪೋಸ್ಟ್ ಮಾಡಲಾದ 2008-ಬ್ಯಾಚ್ IRS ಅಧಿಕಾರಿ ಎಂದು ಸುಳ್ಳು ಹೇಳಿದ್ದ.
ಮದುವೆಯ ಬಳಿಕ ವಿಷಯಗಳು ತಿರುವು ಪಡೆದಿತ್ತು, ತನ್ನ ಪತಿ ಐಆರ್​ಎಸ್​ ಅಧಿಕಾರಿಯಲ್ಲ ಎಂಬುದು ಗೊತ್ತಾಗಿತ್ತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಮಹಿಳಾ ಡಿಎಸ್ಪಿ ತನ್ನ ದಾಂಪತ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಸುಮ್ಮನಿದ್ದರು.

ಆದರೆ ಕೊನೆಗೆ ಆತ ಹೆಂಡತಿಯ ಹೆಸರಿನಲ್ಲಿ ವಂಚನೆ ಮಾಡಲು ಶುರು ಮಾಡಿದ್ದ, ಇದರಿಂದ ಬೇಸತ್ತು ಶ್ರೇಷ್ಠಾ ಠಾಕೂರ್ ಮದುವೆಯಾಗಿ ಎರಡು ವರ್ಷಗಳ ಬಳಿಕ ರೋಹಿತ್ ರಾಜ್​ಗೆ ವಿಚ್ಛೇದನ ನೀಡಿದ್ದರು.

ಆದರೂ ಸಮಸ್ಯೆ ಬಗೆಹರಿದಿರಲಿಲ್ಲ, ಆತ ವಂಚನೆಯನ್ನು ಮುಂದುವರೆಸಿದ್ದ ಹೀಗಾಗಿ ಅನಿವಾರ್ಯವಾಗಿ ಅವರು ಘಾಜಿಯಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ರೋಹಿತ್ ಆಕೆಗೂ ಕೂಡ ಲಕ್ಷಾಂತರ ರೂಪಾಯಿ ಹಣವನ್ನು ವಂಚಿಸಿದ್ದ ಎಂಬುದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

error: Content is protected !!