ಬ್ರೆಜಿಲ್: ವಿಚ್ಛೇದನವು ಎಂಬುದು ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ ಬ್ರೆಜಿಲ್‌ನ ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಪಡೆದ ನಂತರ ತನ್ನ ಸ್ನೇಹಿತರೊಂದಿಗೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ವಿಶೇಷವಾಗಿ ಡಿವೋರ್ಸ್ ಪಾರ್ಟಿಯೊಂದನ್ನು ಏರ್ಪಡಿಸಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾಳೆ.
ವೃತ್ತಿಯಲ್ಲಿ ಮಾಡೆಲ್ ಆಗಿರುವ ಲಾರಿಸ್ಸಾ ಸಂಪನಿ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗಷ್ಟೇ ತನ್ನ ಪತಿಗೆ ವಿಚ್ಛೇದನ ನೀಡಿರುವ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಡೈಲಿ ಸ್ಟಾರ್ ವರದಿಯ ಪ್ರಕಾರ, ಲಾರಿಸ್ಸಾ ಮದುವೆಯಾಗಿ ಕೇವಲ 6 ತಿಂಗಳಾಗಿದ್ದು, ಈಗ ಪತಿಗೆ ವಿಚ್ಛೇದನ ನೀಡಿದ್ದಾಳೆ. ಕಳೆದ ಮೂರು ವರ್ಷಗಳಿಂದ ಒಟ್ಟಿಗೆ ಲೀವಿಂಗ್ ರಿಲೇಷನ್ ಶಿಪ್ನ್ಲಲಿದ್ದ ಲಾರಿಸ್ಸಾ. ಆದರೆ ತನ್ನ ವಿಚ್ಛೇದನದಿಂದ ತುಂಬಾ ಸಂತೋಷವಾಗಿದ್ದು, ಈ ವಿಚ್ಛೇದನದ ಪಾರ್ಟಿಯಲ್ಲಿ ಕೇಕ್ ಕಟ್ ಮಾಡಿ ತನ್ನ ಸ್ನೇಹಿತರ ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾಳೆ. ಇದಲ್ಲದೇ ಆಕೆ ಪಾರ್ಟಿಗಾಗಿ 4 ಲಕ್ಷ ರೂ. ಖರ್ಚು ಮಾಡಿರುವುದು ವರದಿಯಾಗಿದೆ.
ವಿಚಿತ್ರ ಕಾರಣಗಳಿಗಾಗಿ ವಿಚ್ಛೇದನ:
ವರದಿಗಳ ಪ್ರಕಾರ, 24 ವರ್ಷದ ಲಾರಿಸ್ಸಾ ತನ್ನ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸಿದ್ದು, ಆಕೆಯ ಕಾರಣ ತಿಳಿದರೆ ಶಾಕ್ ಆಗುವುದಂತೂ ಖಂಡಿತಾ. ಲಾರಿಸ್ಸಾಗೆ ಹುಡುಗರ ಜೊತೆಗೆ ಮಾತ್ರವಲ್ಲದೇ ಹುಡುಗಿಯರ ಜೊತೆಗೂ ಸಂಬಂಧವನ್ನು ಹೊಂದಲು ಬಯಸುತ್ತಾಳಂತೆ. ಇದಲ್ಲದೇ ತನ್ನ ಪತಿಯೊಂದಿಗೆ ಮಾತ್ರವಲ್ಲದೇ ಬೇರೆಯವರೊಂದಿಗೂ ಸಂಬಂಧವನ್ನು ಬೆಳೆಸಲು ಆಸಕ್ತಿ ಇರುವುದರಿಂದ ಈ ಕಾರಣವನ್ನು ತನ್ನ ಮಾಜಿ ಪತಿಯೊಂದಿಗೆ ಹೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಒಪ್ಪದ ತನ್ನ ಪತಿಗೆ ಲಾರಿಸ್ಸಾ ವಿಚ್ಛೇದನ ನೀಡಿದ್ದಾಳೆ.