ನ್ಯೂಯಾರ್ಕ್: ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ನಿಧನರಾಗಿದ್ದಾರೆ. ಶೆರಿಕಾ 2015 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದರು. ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, ಶೆರಿಕಾ ಡಿ ಅರ್ಮಾಸ್ ಗರ್ಭಕಂಠದ ಕ್ಯಾನ್ಸರ್ನಿಂದಾಗಿ ಅಕ್ಟೋಬರ್ 13 ರಂದು 26 ನೇ ವಯಸ್ಸಿನಲ್ಲಿ ನಿಧನರಾದರು. ಡಿ ಅರ್ಮಾಸ್ ಅವರು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಶೆರಿಕಾ ಸಾವಿನ ಸುದ್ದಿಯಿಂದ ಅಭಿಮಾನಿಗಳು ಶಾಕ್ ಆಗಿದ್ದು, ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶೆರಿಕಾ ಸಾವಿಗೆ ಉರುಗ್ವೆ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಶೋಕಾಚರಣೆ ನಡೆಸಿದ್ದು, ಆಕೆಯ ಸಹೋದರ ಮಾಯಕ್ ಡಿ ಅರ್ಮಾಸ್, 2021 ರ ಮಿಸ್ ಉರುಗ್ವೆ ಲೋಲಾ ಡಿ ಲಾಸ್ ಸ್ಯಾಂಟೋಸ್ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಶೆರಿಕಾ ಕುರಿತು ಬರೆದಿದ್ದು, ಮಿಸ್ ಯೂನಿವರ್ಸ್ ಉರುಗ್ವೆ 2022 ಕಾರ್ಲಾ ರೊಮೆರೊ ಅವರು ಮಿಸ್ ಡಿ ಅರ್ಮಾಸ್ ನಾನು ಭೇಟಿಯಾದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಪೋಸ್ಟ್ ಮಾಡಿದ್ದಾರೆ.